ನೀವು ನಿಮ್ಮ ಕಂಪ್ಯೂಟರ್ನ್ನು ಟರ್ನ್ ಆಫ್ ಮಾಡುವ ಬದಲು Hibernate ಮಾಡಿದರೆ ನಿಮ್ಮ ಅಮೂಲ್ಯ ಸಮಯ ಹಾಗೂ ವಿದ್ಯುತ್ ಉಳಿಸಬಹುದು. ಹೈಬರ್ನೇಟ್ ಮಾಡಿಡುವುದರಿಂದ ವಿಂಡೋಸ್ ಲೋಡ್ ಆಗಲು ಕಡಿಮೆ ಸಮಯ ಸಾಕಾಗುತ್ತದೆ. ಇದರಿಂದ ಸಮಯ ಹಾಗೂ ವಿದ್ಯುತ್ ಉಳಿತಾಯವಾಗುತ್ತದೆ. ಅಲ್ಲದೇ ಹೈಬರ್ನೇಟ್ ಮಾಡಿಡುವುದರಿಂದ ಎಲ್ಲಾ ಅಪ್ಲಿಕೇಷನ್ಗಳನ್ನು ಮತ್ತೊಮ್ಮೆ ಪ್ರಾರಂಭ ಮಾಡಬೇಕಾಗುವುದಿಲ್ಲ.
ಈಗ ಹೈಬರ್ನೇಟ್ ಮಾಡುವುದು ಹೇಗೆಂದು ನೋಡೋಣ. ಮೊದಲು Control Panel (start-->Control Panel) ಗೆ ಹೋಗಿ.
ಅಲ್ಲಿ Power options ಓಪನ್ ಮಾಡಿ, ಅಲ್ಲಿ Hibernate ಟ್ಯಾಬ್ ಕ್ಲಿಕ್ ಮಾಡಿ. ಕೆಳಗೆ Enable Hibernation ಎಂಬುದನ್ನು ಸೆಲೆಕ್ಟ್ ಮಾಡಿ. Disk space for Hibernation ಎಂಬಲ್ಲಿ ಸಾಕಷ್ಟು ಖಾಲಿ ಜಾಗ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ Apply ಬಟನ್ ಒತ್ತಿರಿ.
ಅದಾದಮೇಲೆ Advanced ಟ್ಯಾಬ್ ಕ್ಲಿಕ್ ಮಾಡಿ.
ಅಲ್ಲಿ When I press the power button on my computer ಎಂಬಲ್ಲಿ Hibernate ಆರಿಸಿ OK ಒತ್ತಿರಿ. ಜೊತೆಗೆ Prompt for password when computer resumes from standby ಎನ್ನುವುದು ಸೆಲೆಕ್ಟ್ ಆಗಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಇದು ಸೆಲೆಕ್ಟ್ ಆಗಿದ್ದರೆ Windows resume ಅದಮೇಲೆ ಪಾಸ್ವರ್ಡ್ ಇದ್ದರೆ ಅದನ್ನು ಕೊಡಬೇಕಾಗುತ್ತದೆ ಇಲ್ಲದಿದ್ದರೆ ಯೂಸರ್ನೇಮ್ನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಇದಿಷ್ಟು ಮೊದಲನೇ ಹಂತದ ಕೆಲಸಗಳು. ಈಗ ಹೈಬರ್ನೇಟ್ ಹೇಗೆ ಮಾಡಬಹುದು ಎಂದು ನೋಡೋಣ. ಇದನ್ನು ಮೂರು ರೀತಿ ಮಾಡಬಹುದು.
ಮೊದಲನೇ ರೀತಿ: When I press the power button on my computer ಎಂಬಲ್ಲಿ Hibernate ಆಯ್ಕೆಯನ್ನು ಆರಿಸಿರುವುದರಿಂದ ನಿಮ್ಮ ಕಂಪ್ಯೂಟರ್ ಆನ್ ಆಗಿದ್ದಾಗ CPUನಲ್ಲಿ ಪವರ್ ಗುಂಡಿ ಒತ್ತಿದರೆ ಕಂಪ್ಯೂಟರ್ ಹೈಬರ್ನೇಟ್ ಆಗುತ್ತದೆ.
ಎರಡನೇ ರೀತಿ: Turn off computer ಕೊಟ್ಟ ನಂತರ ಕೀಬೋರ್ಡ್ನಲ್ಲಿ shift ಗುಂಡಿ ಒತ್ತಿ ಹಿಡಿಯಿರಿ, ಆಗ Stand By ಜಾಗದಲ್ಲಿ Hibernate ಎಂದು ಬರುತ್ತದೆ. ಅದನ್ನು ಕ್ಲಿಕ್ಕಿಸುವುದರ ಮೂಲಕ ಹೈಬರ್ನೇಟ್ ಮಾಡಬಹುದು.
ಮೂರನೆಯ ರೀತಿ: ಡೆಸ್ಕ್ಟಾಪ್ನಲ್ಲಿ ರೈಟ್ ಕ್ಲಿಕ್ ಮಾಡಿ, New-->Shortcut ಸೆಲೆಕ್ಟ್ ಮಾಡಿ.
Type the location of the item ಎಂಬ ಜಾಗದಲ್ಲಿ ಈ ಕೆಳಗಿನ ಸಾಲುಗಳನ್ನು ಪೇಸ್ಟ್ ಮಾಡಿ.
rundll32.exe PowrProf.dll, SetSuspendState
ನಂತರ Next ಬಟನ್ ಒತ್ತಿರಿ.
Type a name for this shortcut ಜಾಗದಲ್ಲಿ Hibernate ಎಂದು ಕೊಟ್ಟು Finish ಒತ್ತಿರಿ.
ಅದೇ ರೀತಿ ಮೂರನೇ ವಿಧಾನದಲ್ಲಿ Type the location of the item ಎಂಬ ಜಾಗದಲ್ಲಿ
shutdownಗೆ SHUTDOWN -s -t 01
ಹಾಗೂ restartಗೆ SHUTDOWN -r -t 01
ಬಳಸಬಹುದು.
-ಪ್ರಸನ್ನ.ಎಸ್.ಪಿ
1 comment:
ಒಳ್ಳೆಯ ಮಾಹಿತಿ ಕೊಟ್ಟಿದ್ದಿರಿ ಪ್ರಸನ್ನ. ನಿಮ್ಮ ಬ್ಲಾಗ್ ಬರಹವನ್ನು ಹೀಗೆ ಮುಂದುವರೆಸಿ..
Post a Comment