ನನ್ನ ಬಗ್ಗೆ

ಪೂರ್ಣ ಹೆಸರು: ಪ್ರಸನ್ನ ಶಂಕರಪುರ
ಜನ್ಮ ದಿನಾಂಕ: ಏಪ್ರಿಲ್-2-1993
ನನ್ನನ್ನು ಸಂಪರ್ಕಿಸಲು ಇ-ಮೇಲ್ ವಿಳಾಸ: shankarapura(at)gmail(dot)com
ಮೊಬೈಲ್ ಸಂಖ್ಯೆ: (2370184750 X 4) + (200)



ಪರಿಚಯ:
ನಾನು ಹುಟ್ಟಿದ್ದು ಬೆಳೆದಿದ್ದೆಲ್ಲಾ ಕರ್ನಾಟಕದ ಮಲೆನಾಡಿನಲ್ಲಿ. ನನ್ನ ಸ್ವಂತ ಊರು ಕೊಪ್ಪ ತಾಲ್ಲೂಕಿನ ಶಂಕರಪುರ. ನಾನೊಬ್ಬ ವಿಜ್ಞಾನದ ವಿದ್ಯಾರ್ಥಿ.

ವಿಜ್ಞಾನ, ತಂತ್ರಜ್ಞಾನ ಹಾಗೂ ಕಂಪ್ಯೂಟರ್‍ ನನ್ನ ಆಸಕ್ತಿಯ ವಿಷಯಗಳು. ಬೇರೆಯವರಿಗೆ ಕಂಪ್ಯೂಟರ್‌ನ ಬಗ್ಗೆ ಹೇಳಿಕೊಡುವುದು ನನಗೆ ಖುಷಿ ನೀಡುವ ಸಂಗತಿ. ಅಂತರ್ಜಾಲದಲ್ಲಿ ಕನ್ನಡ ಭಾಷೆಯಲ್ಲಿ ಕಂಪ್ಯೂಟರ್‌‌ ಹಾಗೂ ತಂತ್ರಜ್ಞಾನದ ಬಗ್ಗೆ ಲೇಖನ ಬರೆಯುವುದು ನನ್ನ ಹವ್ಯಾಸ. ಕಂಪ್ಯೂಟರ್‍ ಹಾಗೂ ತಂತ್ರಜ್ಞಾನದ ಬಗ್ಗೆ ಒಂದು ರಾಶಿ ಲೇಖನ ಬರೆದು ಇಟ್ಟಿದ್ದೇನೆ. ಯಾರಾದರೂ ಪ್ರಕಾಶಕರು ಸಿಕ್ಕಿದರೆ ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತರಬೇಕು ಎನ್ನುವ ಆಸೆ ಇದೆ. ತಂತ್ರಜ್ಞಾನ ಹಾಗೂ ಕಂಪ್ಯೂಟರ್‍ ಬಗೆಗಿನ ಲೇಖನಗಳಿಗೆ ಮೀಸಲಾದ ಟೆಕ್-ಕನ್ನಡ ಎಂಬ ತಾಣವನ್ನು ಪ್ರಾರಂಭಿಸಿದ್ದೇನೆ. ಅದಿನ್ನೂ ಬಾಲ್ಯಾವಸ್ಥೆಯಲ್ಲಿದೆ, ಅದನ್ನು ಬೆಳೆಸುವಲ್ಲಿ ನೀವು ಆಸಕ್ತರಾಗಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ. ‍ ಕನ್ನಡ ವಿಕಿಪೀಡಿಯಾಕ್ಕೆ ಲೇಖನಗಳನ್ನು ಬರೆಯುತ್ತೇನೆ. ಸಂಪದದಲ್ಲಿ ಬರೆಯುವುದು ಹಾಗೂ ಸಂಪದವನ್ನು ಜಾಲಾಡುವುದು ನನಗೆ ಇಷ್ಟವಾಗುತ್ತದೆ. ಲಿನಕ್ಸ್ ಹಾಗೂ ಮುಕ್ತ ತಂತ್ರಾಶವನ್ನು ಬೆಂಬಲಿಸುತ್ತೇನೆ.


ನಾನು ಕನ್ನಡ ಪುಸ್ತಕಗಳನ್ನು ಓದುತ್ತೇನೆ. ಪೂರ್ಣ ಚಂದ್ರ ತೇಜಸ್ವಿ, ನಾಗೇಶ ಹೆಗಡೆ, ಕಾರಂತರ ಬರಹಗಳು ಇಷ್ಟವಾಗುತ್ತದೆ. ಕಲೆ, ಸಾಹಿತ್ಯ, ವಿಜ್ಞಾನ, ವಾಣಿಜ್ಯ, ಕೃಷಿ, ರಾಜಕೀಯ, ಪತ್ರಿಕೋದ್ಯಮಕ್ರೀಡೆ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಆಸಕ್ತಿ ಇದೆ.


ನನ್ನನ್ನು ಬೇರೆ ಎಲ್ಲಿ ನೋಡಬಹುದು:

No comments: