- ದೋಸೆ ಅಥವಾ ಇಡ್ಲಿ ಹಿಟ್ಟಿಗೆ ಒಂದು ಹೋಳು ಆಲೂಗಡ್ಡೆ ಹಾಕಿದರೆ ಚೆನ್ನಾಗಿ ಹುದುಗು ಬರುತ್ತದೆ.
- ಹಲಸಿನಕಾಯಿ ಹಪ್ಪಳ ಮಾಡುವಾಗ ಹಿಟ್ಟು ನೀರಾದರೆ ಅದಕ್ಕೆ ಸ್ವಲ್ಪ ಅವಲಕ್ಕಿ ಪುಡಿ ಸೇರಿಸಿ ಹಪ್ಪಳ ಮಾಡಿದರೆ ಗಟ್ಟಿಯಾಗಿ ಬರುತ್ತದೆ ಹಾಗೂ ರುಚಿಯೂ ಚೆನ್ನಾಗಿರುತ್ತದೆ.
- ಹೀರೇಕಾಯಿ ಬೋಂಡ ಮಾಡುವಾಗ ಹಿಟ್ಟಿಗೆ ಒಂದು ಚೂರು ಅರಿಶಿಣ ಪುಡಿ ಹಾಕಿದರೆ ಬೋಂಡ ಕೆಂಪು ಬಣ್ಣ ಬರುತ್ತದೆ.
- ಬಾಳೇಕಾಯಿ ಅಥವಾ ಹಲಸಿನಕಾಯಿ ಚಿಪ್ಸ್ ಕರಿಯುವಾಗ ಎಣ್ಣೆಗೆ ಉಪ್ಪುನೀರು ಹಾಕಿದರೆ ಚಿಪ್ಸ್ ಗರಿಗರಿಯಾಗಿ ಬರುತ್ತದೆ.
- ದೋಸೆ ಮಾಡುವಾಗ ಕಾವಲಿಗೆ ಈರುಳ್ಳಿ ಚೂರು ಉಜ್ಜಿದರೆ ದೋಸೆ ತಳ ಹಿಡಿಯುವುದಿಲ್ಲ.
- ಈರುಳ್ಳಿ ಹೆಚ್ಚುವಾಗ ಚಾಕು ಬಿಸಿ ಮಾಡಿಕೊಂಡರೆ ಕಣ್ಣು ಉರಿಯುವುದಿಲ್ಲ.
Sunday, July 18, 2010
ಅಡುಗೆ ಸಲಹೆಗಳು
Subscribe to:
Post Comments (Atom)
No comments:
Post a Comment