ನೀವು ಹಾಟ್‌ಮೇಲ್ ಅಥವಾ ಲೈವ್‌ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್‌ಗಳನ್ನು ನಿಮ್ಮ ಮೊಬೈಲ್‌ನ ಮುಖಾಂತರ ನೋಡಬಹುದು ಹಾಗೂ ಅದಕ್ಕಾಗಿ ನೀವು ಯಾವುದೇ ಶುಲ್ಕವನ್ನೂ ನೀಡುವುದು ಬೇಕಾಗಿಲ್ಲ.
ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನೀವು ಇಲ್ಲಿ ನೀಡಿರುವ ಜಾಲತಾಣಕ್ಕೆ ಹೋಗಬೇಕು.
ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನೀವು ಇಲ್ಲಿ ನೀಡಿರುವ ಜಾಲತಾಣಕ್ಕೆ ಹೋಗಬೇಕು.
ಅಲ್ಲಿ ನಿಮ್ಮ user name ಹಾಗೂ password ಕೊಟ್ಟು Sign in ಆಗಿ
ನಂತರ ಅಲ್ಲಿ ಕೊಟ್ಟಿರುವ ಜಾಗದಲ್ಲಿ +91ಸೇರಿಸಿ ನಿಮ್ಮ ಮೊಬೈಲ್ ನಂಬರ್ ಟೈಪಿಸಿ. ಉದಾ: +919400024365
ನಂಬರ್ ಕೊಟ್ಟ ನಂತರ Next ಬಟನ್ ಒತ್ತಿರಿ.
ನಂಬರ್ ಕೊಟ್ಟ ನಂತರ Next ಬಟನ್ ಒತ್ತಿರಿ.
ಈಗ ನಿಮ್ಮ ಮೊಬೈಲ್‌ಗೆ ಒಂದು ಸಂದೇಶ ಬರುತ್ತದೆ. ಅವರು ಕಳುಹಿಸಿರುವ ಸಂದೇಶದಲ್ಲಿ ಒಂದು verification code ಇರುತ್ತದೆ.(ಉದಾ:4873). ಅದನ್ನು ಮೇಲಿನ ಬಾಕ್ಸ್‌ನಲ್ಲಿ ಟೈಪಿಸಿ Next ಬಟನ್ ಕ್ಲಿಕ್ಕಿಸಿ.
ನಂತರ Save ಬಟನ್ ಒತ್ತಿರಿ. ಈಗ ನಿಮ್ಮ inboxಗೆ ಬರುವ ಮೇಲ್‌ಗಳು ನಿಮ್ಮ ಮೊಬೈಲ್‌ಗೂ ಬರುತ್ತದೆ. ಆದರೆ ಪೂರ್ತಿ ಮೇಲ್ SMS ಮೂಲಕ ಬರುವುದಿಲ್ಲ. ಮೇಲ್‌ನ ವಿಷಯ ಹಾಗೂ matterನ ಒಂದೆರಡು ಲೈನ್‌ಗಳು ಮಾತ್ರ ಉಚಿತವಾಗಿ ಬರುತ್ತದೆ. ನೀವು ಆ ಮೇಲ್‌ನ್ನು ಇನ್ನೂ ನೋಡಬೇಕೆಂದರೆ ಆ ನಂಬರ್‌ಗೆ M ಎಂದು ರಿಪ್ಲೇ ಮಾಡಬೇಕು. ಆದರೆ ನೆನಪಿಡಿ ಹೀಗೆ ನೀವು ರಿಪ್ಲೇ ಮಾಡಿದಾಗ ಅವರು ಮತ್ತೊಂದು SMS ಕಳುಹಿಸುವುದಕ್ಕೆ ಸುಮಾರಾಗಿ 1.50 ರೂ. ದರ ವಿಧಿಸುತ್ತಾರೆ. ನೀವು ಇದನ್ನು ಯಾವುದಾದರೂ ತುರ್ತು ಸಂದೇಶಗಳನ್ನು ನೋಡಲು ಬಳಸಬಹುದು.
No comments:
Post a Comment