Monday, September 27, 2010

ವಿಂಡೋಸ್ ಮತ್ತು ಯೂಸರ್‍ ಅಕೌಂಟ್

ವಿಂಡೋಸ್ (ಎಕ್ಸ್‌ಪಿ) ಬಳಕೆದಾರರು ಅಡ್ಮಿನಿಸ್ಟ್ರೇಟರ್‍ ಹೆಸರಿನ (Administrator) ಯೂಸರ್‍ ಅಕೌಂಟ್‌ ಉಪಯೊಗಿಸುತ್ತಿದ್ದಾಗ, ಕಂಟ್ರೋಲ್ ಪ್ಯಾನಲ್‌ನ User accounts ಮೂಲಕ ಹೊಸ ಅಕೌಂಟ್ ಸೃಷ್ಠಿ ಮಾಡಿದರೆ, ಮುಂದಿನ ಬಾರಿ ವಿಂಡೋಸ್ ಪ್ರಾರಂಭವಾಗುವಾಗ ವೆಲ್‌ಕಮ್ ಸ್ಕ್ರೀನ್‌ನಲ್ಲಿ ಅಡ್ಮಿನಿಸ್ಟ್ರೇಟರ್‍ ಹೆಸರಿನ ಯೂಸರ್‍ ಅಕೌಂಟ್‌ ತೋರಿಸುವುದಿಲ್ಲ. ಬದಲಾಗಿ ನೀವು ಹೊಸದಾಗಿ ಸೃಷ್ಠಿಸಿದ ಯೂಸರ್‍ ಅಕೌಂಟನ್ನು ತೋರಿಸುತ್ತದೆ ಹಾಗೂ ಅದಕ್ಕೆ ಪಾಸ್‌ವರ್ಡ್ ನೀಡಿರದಿದ್ದರೆ ತಾನಾಗಿಯೇ ಲಾಗಿನ್ ಆಗುತ್ತದೆ. ನೀವು ಮತ್ತೆ ಅಡ್ಮಿನಿಸ್ಟ್ರೇಟರ್‍ ಅಕೌಂಟಿಗೆ ಲಾಗಿನ್ ಆಗಬೇಕಾದರೆ ಕಂಟ್ರೋಲ್ ಪ್ಯಾನಲ್‌ನಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಅಡ್ಮಿನಿಸ್ಟ್ರೇಟರ್‍ ಅಕೌಂಟ್ ಜೊತೆಗೇ ಇನ್ನೊಂದು ಅಕೌಂಟ್ ಸೃಷ್ಠಿಸಲು ಒಂದು ದಾರಿಯಿದೆ.


ಮೊದಲು ಮೈ ಕಂಪ್ಯೂಟರ್‍ ಮೇಲೆ ರೈಟ್ ಕ್ಲಿಕ್ ಮಾಡಿ, ನಂತರ Manage ಆರಿಸಿ.


Computer Managementನ ಕೆಳಗೆ Local Users and Groups ಎಂದಿರುತ್ತದೆ. ಅದನ್ನು ಕ್ಲಿಕ್ ಮಾಡಿ, ನಂತರ ಬಲಬದಿಯಲ್ಲಿ Users ಫೋಲ್ಡರಿನ ಮೇಲೆ ಡಬಲ್ ಕ್ಲಿಕ್ ಮಾಡಿ.


ಆಮೇಲೆ ಬಲಬದಿಯಲ್ಲಿ ರೈಟ್ ಕ್ಲಿಕ್ ಮಾಡಿ, New User... ಆರಿಸಿ.


User name: ಇಲ್ಲಿ ಹೊಸ ಯೂಸರ್‍ ನೇಮ್ ಕೊಡಿ. ಉಳಿದ ವಿವರಗಳು ಹಾಗೂ ಪಾಸ್‌ವರ್ಡ್ ಬೇಕಿದ್ದರೆ ಕೊಟ್ಟು, User must change password at next logon ಸೆಲೆಕ್ಟ್ ಆಗಿದ್ದರೆ ಅದನ್ನು ತೆಗೆದುಹಾಕಿ create ಒತ್ತಿ.


ನಂತರ ಮತ್ತೆ ಅದೇ ವಿಂಡೋ ಬರುತ್ತದೆ. ಆಗ Close ಒತ್ತಿ.


ಈಗ Log Off ಮಾಡಿದರೆ Administratorನ ಜೊತೆ ಹೊಸದಾಗಿ ಸೃಷ್ಠಿಸಿದ ಅಕೌಂಟ್ ಕೂಡಾ ದರ್ಶಿತವಾಗುತ್ತಿರುವುದನ್ನು ನೋಡಬಹುದು.

ಆದರೆ ಈ ವಿಧಾನದ ಒಂದು ಕೊರತೆ ಎಂದರೆ ಹಾಗೆ ಸೃಷ್ಠಿಸಿದ ಅಕೌಂಟ್ "ಕಂಪ್ಯೂಟರ್‍ ಅಡ್ಮಿನಿಸ್ಟ್ರೇಟರ್‍" ಅಕೌಂಟ್ ಆಗಿರುವುದಿಲ್ಲ, ಬದಲಾಗಿ ಲಿಮಿಟೆಡ್ ಅಕೌಂಟ್ ಆಗಿರುತ್ತದೆ.




ಈಗ ವೆಲ್‌ಕಮ್ ಸ್ಕ್ರೀನ್‌ನಲ್ಲಿ Administrator ಅಕೌಂಟ್ ತೋರಿಸುತ್ತಿಲ್ಲವಾದ್ದಲ್ಲಿ, Administrator ಅಕೌಂಟಿಗೆ ಲಾಗಿನ್ ಆಗುವುದು ಹೇಗೆಂದು ನೋಡೋಣ.

ಮೊದಲು ಕಂಟ್ರೋಲ್ ಪ್ಯಾನಲ್‌ಗೆ ಹೋಗಿ(Start-->Control Panel). User Accounts ಓಪನ್ ಮಾಡಿ. Change the way users log on or off ಮೇಲೆ ಕ್ಲಿಕ್ ಮಾಡಿ.





ಅಲ್ಲಿ  Use the Welcome screen ಎನ್ನುವುದು ಸೆಲೆಕ್ಟ್ ಆಗಿದ್ದರೆ ಅದನ್ನು ತೆಗೆದುಹಾಕಿ Apply Options ಒತ್ತಿ.


ಮುಂದಿನ ಬಾರಿ ವಿಂಡೋಸ್ ಪ್ರಾರಂಭವಾದಾಗ ವೆಲ್‌ಕಮ್ ಸ್ಕ್ರೀನ್ ಬದಲಿಗೆ ಕೆಳಗೆ ತೋರಿಸಿರುವ ವಿಂಡೋ ಬರುತ್ತದೆ. ಅಲ್ಲಿ ಯೂಸರ್‍ ನೇಮ್ Administrator ಎಂದು ಟೈಪಿಸಿ, ಪಾಸ್‌ವರ್ಡ್‌ ಇದ್ದರೆ ಕೊಟ್ಟು OK ಒತ್ತಿರಿ. ಅಷ್ಟೇ! ಈಗ ನೀವು ಅಡ್ಮಿನಿಸ್ಟ್ರೇಟರ್‍ ಅಕೌಂಟಿಗೆ ಲಾಗಿನ್ ಆಗಿರುತ್ತೀರ. :-) 


ಈ ಬರಹದಿಂದ ಏನು ಉಪಯೋಗ ಆಗುತ್ತೋ ಗೊತ್ತಿಲ್ಲ. ನಾಲ್ಕೈದು ದಿನದಿಂದ ಏನೂ ಬರೆದಿರಲಿಲ್ಲ, ಅದಕ್ಕೇ ಸುಮ್ಮನೆ ಇದನ್ನು ಬರೆದೆ. :-)

-ಪ್ರಸನ್ನ.ಎಸ್.ಪಿ 


Web Hosting

1 comment:

Anonymous said...

Hi Prasanna,

Here at the end, rather than taking to "Control Panel -> User Accounts -> Change the Way Users LogOn/Off -> Disabling Check box -> Restart Windows", you can have below alternative.

At you "Welcome screen", when displayed with 2 accounts, press "Ctrl + Alt + Del" twice. This will change the interface to Username/Password seeking one.

This would be easier for temporary requirement of the user. :)

-Vijay