ಇವತ್ತು ಮಧ್ಯಾಹ್ನ ನನ್ನ ಮೊಬೈಲಿಗೆ ಯಾವುದೋ ನಂಬರಿಂದ ಕಾಲ್ ಬಂತು. ಯಾರದಪ್ಪಾ ಈ ನಂಬರ್ ಅಂತ ಅಂದುಕೊಂಡು ರಿಸೀವ್ ಮಾಡಿದರೆ ಆ ಕಡೆಯಿಂದ "ನೀವು ನೀಡಿದ ಆರ್ಡರ್‍ನಂತೆ ನಿಮ್ಮ ಮನೆಗೆ 2500 ಮೊಟ್ಟೆ ಕಳುಹಿಸಿದ್ದೇವೆ, ಲಾರಿ ಡ್ರೈವರ್ ಹತ್ರ 5000 ರೂಪಾಯಿ ಕೊಟ್ಟುಬಿಡಿ" ಎಂದು ಹೇಳಿದರು. ನನಗೆ ಒಂದು ಸಲ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ನಾನು ಮೊಟ್ಟೇನೆ ತಿನ್ನಲ್ಲ, ಅಂತದರಲ್ಲಿ ಎರಡೂವರೆ ಸಾವಿರ ಮೊಟ್ಟೆಗೇಕೆ ಆರ್ಡರ್ ಮಾಡುತ್ತೇನೆ, ಬಹುಷಃ ರಾಂಗ್ ನಂಬರ್ ಡಯಲ್ ಮಾಡಿರಬೇಕು ಎಂದುಕೊಳ್ಳುತ್ತಿರುವಾಗಲೇ ಆ ಕಡೆಯಿಂದ ಮತ್ತೆ ಧ್ವನಿ ಕೇಳಿಬಂತು- "ನೀವೂ ನಿಮ್ಮ ಸ್ನೇಹಿತರನ್ನು ಇದೇ ರೀತಿ ಬೇಸ್ತು ಬೀಳಿಸಬೇಕೆ? ಹಾಗಾದರೆ ನಮ್ಮ ಕಾಲರ್ ಟ್ಯೂನ್ಸ್‌ಗೆ ಚಂದಾದಾರರಾಗಿ, ದರಗಳು ತಿಂಗಳಿಗೆ 28 ರೂಪಾಯಿ ಮಾತ್ರ. ಕಾಲರ್ ಟ್ಯೂನ್ ಸೆಟ್ ಮಾಡಿಕೊಳ್ಳುವುದಕ್ಕಾಗಿ ಸ್ಟಾರ್ ಹಾಗೂ ಒಂಭತ್ತನ್ನು ಒತ್ತಿ. ಕಂಡೀಷನ್ಸ್ ಅಪ್ಲೈ."
ಇದನ್ನು ಕೇಳಿ ನಾನೂ ಬೇಸ್ತು ಬಿದ್ದೆನಲ್ಲಾ ಅಂತ ಸಿಕ್ಕಾ ಪಟ್ಟೆ ನಗು ಬಂತು. ನಿಮಗೂ +919449056700 ನಂಬರಿಂದ ಕಾಲ್ ಬಂದರೆ ರಿಸೀವ್ ಮಾಡಿ, ತಮಾಷೆಯಾಗಿರುತ್ತದೆ. :-)
ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ
2 comments:
ಯಾರೋ ಹುಡುಗಿಯೊಬ್ಬಳು ಮಾತನಾಡುವ ಹಲೋ ಟ್ಯೂನ್ ಕೂಡ ಇದೆ! :)
ಹೌದು, ಅವಳು ದಬಾಯಿಸಿ ಮಾತನಾಡುವ ಟ್ಯೂನ್ ತಮಾಷೆಯಾಗಿತ್ತು! :-)
ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು,
-ಪ್ರಸನ್ನ.ಎಸ್.ಪಿ
Post a Comment