Wednesday, September 22, 2010

ಟೆಸ್ಟ್‌ಡಿಸ್ಕ್ ಎಂಬ ಆಪತ್ಬಾಂಧವ

ಏನೋ ಪ್ರಯೋಗ ಮಾಡೋಕೆ ಹೋಗಿ ನಿಮ್ಮ ಹಾರ್ಡ್‌ಡಿಸ್ಕ್‌‌ನ ಯಾವುದಾದರೂ ಅಮೂಲ್ಯ ಪಾರ್ಟಿಷನ್‌ ಅಳಿಸಿ ಹೋಗಿದೆಯೇ/ಮಾಯವಾಗಿದೆಯೇ? ಚಿಂತಿಸಬೇಡಿ, ಆ ಪಾರ್ಟಿಷನ್‌ ಮರಳಿ ಪಡೆಯಲು ಒಂದು ಸುಲಭದ ವಿಧಾನವಿದೆ. ಅದೇ ಟೆಸ್ಟ್‌ಡಿಸ್ಕ್ ಎಂಬ ಸಲಕರಣೆ. ಮೊದಲು ಟೆಸ್ಟ್‌ಡಿಸ್ಕ್‌‌ನ್ನು ನಿಮ್ಮ ಆಪರೇಟಿಂಗ್ ಸಿಸ್ಟಮ್‌ಗೆ ಅನುಗುಣವಾಗಿ ಇಲ್ಲಿಂದ ಇಳಿಸಿಕೊಳ್ಳಿ http://www.cgsecurity.org/wiki/TestDisk_Download

ಈಗ ಉಪಯೋಗಿಸುವುದು ಹೇಗೆ ನೋಡೋಣ.
(ಇಲ್ಲಿರುವ ಚಿತ್ರಗಳು ಗಾತ್ರದಲ್ಲಿ ಚಿಕ್ಕದಾಗಿದೆ. ಅದನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ.)

ನನ್ನ ಕಂಪ್ಯೂಟರ್‌ನಲ್ಲಿ Prasanna ಎಂಬ ಪಾರ್ಟಿಷನ್ ಇದೆ.





ಈಗ ಅದನ್ನು ಅಳಿಸಿಹಾಕುತ್ತೇನೆ. ನೋಡಿ Unallocated space ಎಂದು ತೋರಿಸುತ್ತಿದೆ.





ಈಗ ಟೆಸ್ಟ್‌ಡಿಸ್ಕ್ ರನ್ ಮಾಡಿ. Log file ಬೇಕಿದ್ದರೆ Create ಒತ್ತಿರಿ.





ನಂತರ ನಿಮ್ಮ ಹಾರ್ಡ್‌ಡಿಸ್ಕ್‌ನ್ನು ಸೆಲೆಕ್ಟ್ ಮಾಡಿ Proceed ಒತ್ತಿ. 





ನಂತರ ನಿಮ್ಮ ಪಾರ್ಟಿಷನ್ ಟೇಬಲ್ ಟೈಪ್ ಯಾವುದು ಎಂದು ನೋಡಿಕೊಂಡು ಎಂಟರ್‍ ಒತ್ತಿರಿ. (ಸಾಮಾನ್ಯವಾಗಿ Intel ಆಗಿರುತ್ತದೆ.)





ಮುಂದೆ Analyse ಒತ್ತಿ.



ನಂತರ ಈಗಿರುವ ಪಾರ್ಟಿಷನ್‌ ವಿನ್ಯಾಸ ತೋರಿಸುತ್ತದೆ. ಕೆಳಗೆ Quick Searchನ್ನು ಆರಿಸಿ ಎಂಟರ್‍ ಒತ್ತಿ.


ಮುಂದಿನ ವಿಂಡೋನಲ್ಲಿ N ಗುಂಡಿ ಒತ್ತಿ.




ಈಗ ಟೆಸ್ಟ್‌ಡಿಸ್ಕ್ ನಿಮ್ಮ ಎಲ್ಲಾ ಪಾರ್ಟಿಷನ್‌ಗಳನ್ನು ತೋರಿಸುತ್ತದೆ. ಅಲ್ಲಿ Primary bootable(ಸಿ ಡ್ರೈವ್) ಎಕ್ಸ್‌ಟೆಂಡೆಡ್ ಹಾಗೂ Logical ಡ್ರೈವ್‌ಗಳನ್ನು ಸರಿಯಾಗಿ ಗುರುತಿಸಿ ಎಂಟರ್‍ ಒತ್ತಿ.





ಈಗ ಎಲ್ಲಾ ಸರಿಯಿದೆಯೇ ಎಂದು ನೋಡಿಕೊಳ್ಳಲು ಕೊನೆಯ ಅವಕಾಶ. ಪರ್ಟಿಷನ್‌ಗಳೆಲ್ಲಾ ಸರಿಯಾಗಿ ತೋರಿಸುತ್ತಿದೆ ಎಂದು ಅನಿಸಿದರೆ ಕೆಳಗೆ Write ಸೆಲೆಕ್ಟ್ ಮಾಡಿ ಎಂಟರ್‍ ಒತ್ತಿ.





Write partition table, confirm? ಎಂದು ಕೇಳುತ್ತದೆ. ಆಗ Y ಒತ್ತಿರಿ.





You will have to reboot for the change to take effect ಎಂದು ಬರುತ್ತದೆ. Ok ಒತ್ತಿ.





ನಂತರ  Quit ಒತ್ತಿ.



ಮತ್ತೊಮ್ಮೆ Quit ಒತ್ತಿ, ಆಮೇಲೆ ಸಿಸ್ಟಮ್ reboot ಮಾಡಿ.



ಈಗ ನಿಮ್ಮ ಪಾರ್ಟಿಷನ್‌‌ಗಳೆಲ್ಲಾ ರಿಕವರ್‍ ಆಗಿರುತ್ತದೆ.(ನಾನು ಅಳಿಸಿ ಹಾಕಿದ್ದ ಪಾರ್ಟಿಷನ್ ಮರಳಿ ಬಂದಿದೆ ನೋಡಿ.)





ನಾನು ತಿಳಿಸಿರುವ ಸೆಟ್ಟಿಂಗ್‌ಗಳು ವಿಂಡೋಸ್ ಎಕ್ಸ್‌ಪಿಗೆ ಸಂಬಂಧಿಸಿದಂತೆ ಇದೆ. ಬೇರೆ ಆಪರೇಟಿಂಗ್‌ ಸಿಸ್ಟಮ್‌ಗಳಾದರೆ ಅಲ್ಪ ಸ್ವಲ್ಪ ಬದಲಾವಣೆಗಳಿರುತ್ತದೆ. ಇನ್ನು ಎಲ್ಲಾ ಪಾರ್ಟಿಷನ್‌ಗಳೂ ಮಾಯವಾಗಿ ವಿಂಡೋಸ್‌‌ ಕೂಡ ಬೂಟ್ ಆಗದಿದ್ದರೆ ಲಿನಕ್ಸ್ ಲೈವ್ ಸಿಡಿ ಬಳಸಿ ಪಾರ್ಟಿಷನ್ ರಿಕವರ್‍ ಮಾಡಬಹುದು. ಅದರ ಬಗ್ಗೆ ಓಂಶಿವಪ್ರಕಾಶ್ ಈ ಹಿಂದೆಯೇ ಒಂದು ಲೇಖನ ಬರೆದಿದ್ದಾರೆ, ಅದನ್ನು ಇಲ್ಲಿ ಓದಬಹುದು : http://sampada.net/blog/omshivaprakash/20/10/2008/12811


-ಪ್ರಸನ್ನ.ಎಸ್.ಪಿ
ಅಂತಃಸ್ಫುರಣ

Web Hosting