ಟಿವಿ9ನಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಮೇಲೆ ಕೆಳಗೆ ಸುದ್ಧಿಗಳನ್ನು ಪ್ರಕಟಿಸುತ್ತಿರುತ್ತಾರೆ. ಆದರೆ ಆ ಎರಡು ಸುದ್ಧಿಗಳು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ್ದರೆ, ಎರಡನ್ನೂ ಒಟ್ಟಿಗೆ ಕೂಡಿಸಿಕೊಂಡು ಓದಿ, ಎಷ್ಟು ಮಜವಾಗಿರುತ್ತದೆ ಎಂದು ಗೊತ್ತಾಗುತ್ತದೆ. ನಿನ್ನೆ ಅಯೋಧ್ಯೆ ಪ್ರಕರಣಕ್ಕೆ ತೀರ್ಪು ಬಂದ ಬೆನ್ನಲ್ಲೇ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರನೂ ಲಂಚ ಹಗರಣದಲ್ಲಿ ಸಿಕ್ಕಿಬಿದ್ದಿದ್ದು ಟಿವಿ9ನಲ್ಲಿ ಪ್ರಸಾರವಾಗುತ್ತಿತ್ತು. ಮೇಲೆ ಅಯೋಧ್ಯೆಯ ಬಗ್ಗೆ ಹಾಗೂ ಕೆಳಗೆ ಜಗದೀಶ್ ನಾಯ್ಡು ಬಗ್ಗೆ ಸಾಲುಗಳು, ಅದನ್ನು ಕೂಡಿಸಿ ಓದಿದಾಗ ನನಗೆ ಕಾಣಿಸಿದ ತಮಾಷೆ ಇಲ್ಲಿದೆ.
ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ
ಸುಪ್ರಿಂ ಕೋರ್ಟ್‌ಗೆ ಹೋಗಲು ತೀರ್ಮಾನ
ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿಕೆ
ನಿಜವಾದ ಸುದ್ಧಿಗಳನ್ನು ತಿಳಿಯಲು ಒಂದು, ಮೂರು ಹಾಗೂ ಎರಡು ನಾಲ್ಕನೆಯ ಸಾಲುಗಳನ್ನು ಓದಿ.
ಈ ರೀತಿ ಇನ್ನಷ್ಟು ಸುದ್ಧಿಗಳನ್ನು ಗಮನಿಸಿದಿರೆ ನಿಮ್ಮೊಂದಿಗೆ ಹಂಚಿಕೊಳ್ಳುವೆ, ನೀವೂ ಇಂತವುಗಳನ್ನು ನೋಡಿದರೆ ನಮ್ಮೊಂದಿಗೆ ಹಂಚಿಕೊಳ್ಳಿ.
-ಪ್ರಸನ್ನ ಶಂಕರಪುರ
Showing posts with label ಹಾಸ್ಯ. Show all posts
Showing posts with label ಹಾಸ್ಯ. Show all posts
Friday, October 1, 2010
Tuesday, September 14, 2010
2500 ಮೊಟ್ಟೆ, 5000 ರೂಪಾಯಿ!
ಇವತ್ತು ಮಧ್ಯಾಹ್ನ ನನ್ನ ಮೊಬೈಲಿಗೆ ಯಾವುದೋ ನಂಬರಿಂದ ಕಾಲ್ ಬಂತು. ಯಾರದಪ್ಪಾ ಈ ನಂಬರ್ ಅಂತ ಅಂದುಕೊಂಡು ರಿಸೀವ್ ಮಾಡಿದರೆ ಆ ಕಡೆಯಿಂದ "ನೀವು ನೀಡಿದ ಆರ್ಡರ್‍ನಂತೆ ನಿಮ್ಮ ಮನೆಗೆ 2500 ಮೊಟ್ಟೆ ಕಳುಹಿಸಿದ್ದೇವೆ, ಲಾರಿ ಡ್ರೈವರ್ ಹತ್ರ 5000 ರೂಪಾಯಿ ಕೊಟ್ಟುಬಿಡಿ" ಎಂದು ಹೇಳಿದರು. ನನಗೆ ಒಂದು ಸಲ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ನಾನು ಮೊಟ್ಟೇನೆ ತಿನ್ನಲ್ಲ, ಅಂತದರಲ್ಲಿ ಎರಡೂವರೆ ಸಾವಿರ ಮೊಟ್ಟೆಗೇಕೆ ಆರ್ಡರ್ ಮಾಡುತ್ತೇನೆ, ಬಹುಷಃ ರಾಂಗ್ ನಂಬರ್ ಡಯಲ್ ಮಾಡಿರಬೇಕು ಎಂದುಕೊಳ್ಳುತ್ತಿರುವಾಗಲೇ ಆ ಕಡೆಯಿಂದ ಮತ್ತೆ ಧ್ವನಿ ಕೇಳಿಬಂತು- "ನೀವೂ ನಿಮ್ಮ ಸ್ನೇಹಿತರನ್ನು ಇದೇ ರೀತಿ ಬೇಸ್ತು ಬೀಳಿಸಬೇಕೆ? ಹಾಗಾದರೆ ನಮ್ಮ ಕಾಲರ್ ಟ್ಯೂನ್ಸ್‌ಗೆ ಚಂದಾದಾರರಾಗಿ, ದರಗಳು ತಿಂಗಳಿಗೆ 28 ರೂಪಾಯಿ ಮಾತ್ರ. ಕಾಲರ್ ಟ್ಯೂನ್ ಸೆಟ್ ಮಾಡಿಕೊಳ್ಳುವುದಕ್ಕಾಗಿ ಸ್ಟಾರ್ ಹಾಗೂ ಒಂಭತ್ತನ್ನು ಒತ್ತಿ. ಕಂಡೀಷನ್ಸ್ ಅಪ್ಲೈ."
ಇದನ್ನು ಕೇಳಿ ನಾನೂ ಬೇಸ್ತು ಬಿದ್ದೆನಲ್ಲಾ ಅಂತ ಸಿಕ್ಕಾ ಪಟ್ಟೆ ನಗು ಬಂತು. ನಿಮಗೂ +919449056700 ನಂಬರಿಂದ ಕಾಲ್ ಬಂದರೆ ರಿಸೀವ್ ಮಾಡಿ, ತಮಾಷೆಯಾಗಿರುತ್ತದೆ. :-)
ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ
ಇದನ್ನು ಕೇಳಿ ನಾನೂ ಬೇಸ್ತು ಬಿದ್ದೆನಲ್ಲಾ ಅಂತ ಸಿಕ್ಕಾ ಪಟ್ಟೆ ನಗು ಬಂತು. ನಿಮಗೂ +919449056700 ನಂಬರಿಂದ ಕಾಲ್ ಬಂದರೆ ರಿಸೀವ್ ಮಾಡಿ, ತಮಾಷೆಯಾಗಿರುತ್ತದೆ. :-)
ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ
Wednesday, September 8, 2010
ನಮ್ಮ ಸಂಸಾರ ಆನಂದ ಸಾಗರ....
ನಮ್ಮ ಸಂಸಾರ..
(ಅರೆ! ಯಾವನೋ ಫೋಟೋ ತೆಗೀತಿದ್ದಾನಲ್ಲಾ, ಇರು ಉಳಿದವರಿಗೂ ಮುಖ ತೋರಿಸಲು ಹೇಳುತ್ತೇನೆ.)
(ಏಯ್, ಫೋಟೋ ಸರಿಯಾಗಿ ತೆಗೆಯಬೇಕು. ಇಲ್ಲದಿದ್ದರೆ ನಿನ್ನ ಕ್ಯಾಮೆರಾ ನೆಟ್ಟಗಿರುವುದಿಲ್ಲ, ಹುಷಾರ್!)
(ನಮ್ಮ ಸಂಸಾರ, ಆನಂದ ಸಾಗರ.....)
(ಫೋಟೋ ತೆಗ್ದಿದ್ದು ಸಾಕು ಹೋಗಯ್ಯೋ, ಮಕ್ಳು ಆಟ ಆಡ್ಬೇಕು!)
-ಚಿತ್ರ ಮತ್ತು ಬರಹ: ಪ್ರಸನ್ನ ಎಸ್.ಪಿ
ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ.....
ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ.....
ನಾನು
ತೆಳ್ಳಗೆ ಇರಬಯಸುತ್ತೇನೆ,
ಏಕೆಂದರೆ
ನಾನು ಆರೋಗ್ಯವಾಗಿರಬೇಕು.
ನಾನು
ತೆಳ್ಳಗೇ ಇರಬಯಸುತ್ತೇನೆ,
ಏಕೆಂದರೆ
ನಾನು ಸತ್ತಾಗ
ಹೆಣ ಎತ್ತುವವರಿಗೆ
ಭಾರವಾಗಬಾರದು ಅಲ್ಲವೇ?
:-) :D ;-)
-ಪ್ರಸನ್ನ.ಎಸ್.ಪಿ
Thursday, August 12, 2010
ಎಂಜಿನಿಯರಿಂಗ್‌ನಲ್ಲಿ ಅಂಕ ಗಳಿಸುವುದು ಹೀಗೆ!
ಕೆಳಗೆ ಇರುವುದು ಎಂಜಿನಿಯರಿಂಗ್ ಕಾಲೇಜು ಪರೀಕ್ಷೆಯಲ್ಲಿ ಯಾರೋ ಒಬ್ಬಾತ ಬರೆದ ಉತ್ತರದ ನಕಲು ಪ್ರತಿ. ಉತ್ತರವನ್ನು ಕೊನೆಯವರೆಗೂ ಸರಿಯಾಗಿ ನೋಡಿ. ಎಂಜಿನಿಯರಿಂಗ್‌ನಲ್ಲಿ ಅಂಕ ಪಡೆಯಬೇಕಾದರೆ ಶಾರುಖ್ ಖಾನ್‌ನ ಸಿನೆಮಾ ಕಥೆ ಬರೆಯಬೇಕು, ಆಗ ನಾಲ್ಕು ಅಂಕ ಸಿಗುತ್ತದೆ! ಚಿತ್ರ ಪ್ರಸನ್ನ ಕಾಕುಂಜೆ ಅವರ ಫೇಸ್‌ಬುಕ್ ಪ್ರೊಫೈಲ್‌ನಿಂದ.
Monday, August 9, 2010
ಸಮೊಸ ಕಳುಹಿಸಿ
ಇದೇನು ಸಮೋಸವನ್ನು ತಪ್ಪಾಗಿ ಬರೆದಿದ್ದಾನಲ್ಲ ಎಂದುಕೊಳ್ಳಬೇಡಿ. ನಾನು ಹೇಳುತ್ತಿರುವುದು ತಿನ್ನುವ ಸಮೋಸವಲ್ಲ, ಕಳುಹಿಸುವ ಸಮೊಸ. ಏನು, ಅರ್ಥವಾಗಲಿಲ್ಲವೇ? ಸಮೊಸ ಎಂದರೆ "ಸರಳ ಮೊಬೈಲ್ ಸಂದೇಶ" ಅರ್ಥಾತ್ SMS!. ಹೌದು! ಇದು ಮೊಬೈಲಿಂದ ಮೊಬೈಲಿಗೆ ಕಳುಹಿಸುವ ಸಮೊಸ. ನಾವೆಲ್ಲರೂ ಕನ್ನಡಿಗರಲ್ಲವೇ, ಹಾಗಾಗಿ ಇಂಗ್ಲೀಷಲ್ಲಿ ಎಸ್ಸೆಮ್ಮೆಸ್ಸ್ ಎಂದು ಹೇಳುವ ಬದಲು ಅಚ್ಚ ಕನ್ನಡದಲ್ಲಿ ’ಸಮೊಸ’ ಎನ್ನೋಣ. ನಾನಂತೂ ಎಸ್ಸೆಮ್ಮೆಸ್ಸ್ ಬದಲು ಸಮೊಸ ಕಳುಹಿಸುತ್ತಿದ್ದೇನೆ. ನೀವೂ ಇನ್ನು ಮುಂದೆ ಸಮೊಸ ಕಳುಹಿಸಿ.
ಅಂದಹಾಗೆ ’ಸಮೊಸ’ದ ಐಡಿಯ ದೇವರಾಣೆಗೂ ನನ್ನದಲ್ಲ. ನಾನೂ ’ಸಮೊಸ’ದ ಬಗ್ಗೆ ಓದಿದ್ದು ಆಸುಹೆಗ್ಡೆ ಅವರ ಬ್ಲಾಗ್‌ನಲ್ಲಿ. ಸಮೊಸದ ಬಗ್ಗೆ ತಿಳಿಸಿದ ಅವರಿಗೆ ನನ್ನ ಧನ್ಯವಾದಗಳು.
"ಕನ್ನಡ ಉಳಿಸಿ, ಕನ್ನಡ ಬೆಳೆಸಿ" ~~ಜೈ ಕರ್ನಾಟಕ ಮಾತೆ~~
-ಪ್ರಸನ್ನ.ಎಸ್.ಪಿ
-ಪ್ರಸನ್ನ.ಎಸ್.ಪಿ
Thursday, July 29, 2010
ನಿಮ್ಮ ರೋಲ್ ಮಾಡೆಲ್ ಯಾರು?
ನಿಮ್ಮ ರೋಲ್ ಮಾಡೆಲ್ ಯಾರು ಎಂದು ತಿಳಿದುಕೊಳ್ಳಬೇಕೆ? ಹಾಗಾದರೆ ಈ ರೀತಿ ಮಾಡಿ,
.
.
.
.
.
.
.
.
.
.
.
.
.
.
.
.
.
.
1. ಐನ್‌ಸ್ಟೈನ್
2. ನೆಲ್ಸನ್ ಮಂಡೇಲ
3. ಸದ್ದಾಂ ಹುಸೇನ್
4. ಸಚಿನ್ ತೆಂಡೂಲ್ಕರ್
5. ಬಿಲ್ ಗೇಟ್ಸ್
6. ಮಹಾತ್ಮಾ ಗಾಂಧಿ
7. ಅಲೆಕ್ಸಾಂಡರ್
8. ಹಿಟ್ಲರ್
9. ಪ್ರಸನ್ನ.ಎಸ್.ಪಿ
10. ಬರಾಕ್ ಒಬಾಮ
- ಮೊದಲು 1 ರಿಂದ 9ರವರೆಗಿನ ನಿಮಗೆ ಇಷ್ಟ ಬಂದ ಅಂಕಿಯನ್ನು ಇಟ್ಟುಕೊಳ್ಳಿ.
- ಅದನ್ನು 3ರಿಂದ ಗುಣಿಸಿ,
- ಬಂದ ಉತ್ತರಕ್ಕೆ 3ನ್ನು ಸೇರಿಸಿ 3ರಿಂದ ಗುಣಿಸಿ (ನೀವು ಕ್ಯಾಲ್ಕ್ಯುಲೇಟರ್ ಹುಡುಕುವ ವರೆಗೆ ನಾನು ಕಾಯುತ್ತೇನೆ.) ,
- ನೀವೀಗ 2 ಅಥವಾ 3 ಅಂಕಿಗಳುಳ್ಳ ಸಂಖ್ಯೆಯನ್ನು ಪಡೆಯುತ್ತೀರಿ(ಉದಾ:31). ಆ ಸಂಖ್ಯೆಯ ಎಲ್ಲ ಅಂಕಿಗಳನ್ನು ಕೂಡಿರಿ(ಉದಾ 3+1). ನೀವೀಗ ಒಂದು ಒಂಟಿ ಅಂಕಿ [ಸಿಂಗಲ್ ಡಿಜಿಟ್ ನಂಬರ್] ಪಡೆದಿರುತ್ತೀರಿ (ಉದಾ:4) . ಈಗ ಕೆಳಗಡೆ ಆ ಅಂಕಿಯಲ್ಲಿ ಯಾರ ಹೆಸರು ಇದೆ ಎಂದು ನೋಡಿ, ಅವರೇ ನಿಮ್ಮ ರೋಲ್ ಮಾಡೆಲ್ ಆಗಿರುತ್ತಾರೆ.
.
.
.
.
.
.
.
.
.
.
.
.
.
.
.
.
.
.
1. ಐನ್‌ಸ್ಟೈನ್
2. ನೆಲ್ಸನ್ ಮಂಡೇಲ
3. ಸದ್ದಾಂ ಹುಸೇನ್
4. ಸಚಿನ್ ತೆಂಡೂಲ್ಕರ್
5. ಬಿಲ್ ಗೇಟ್ಸ್
6. ಮಹಾತ್ಮಾ ಗಾಂಧಿ
7. ಅಲೆಕ್ಸಾಂಡರ್
8. ಹಿಟ್ಲರ್
9. ಪ್ರಸನ್ನ.ಎಸ್.ಪಿ
10. ಬರಾಕ್ ಒಬಾಮ
Sunday, July 25, 2010
ನೋಡಿದ್ರಾ ಅವನ ಗಟ್ಸ್?
ಒಂದು ಸಮುದ್ರದ ಮಧ್ಯದಲ್ಲಿ ದೊಡ್ಡ ಹಡಗೊಂದರಲ್ಲಿ ಮೂರು ಬೇರೆ ಬೇರೆ ಕಂಪೆನಿಗಳ ಪ್ರಾಜೆಕ್ಟ್ ಮ್ಯಾನೇಜರ್‌ಗಳು ಪ್ರಯಾಣಿಸುತ್ತಿರುತ್ತಾರೆ. ಆಗ ಅವರಲ್ಲಿ ಯಾರ ಕಂಪೆನಿಯ ಉದ್ಯೋಗಿಗಳಿಗೆ ಹೆಚ್ಚು ಗಟ್ಸ್ ಇದೆ ಎಂಬ ಚರ್ಚೆ ಪ್ರಾರಂಭವಾಗುತ್ತದೆ.
ಮೊದಲ ಕಂಪೆನಿಯ ಮ್ಯಾನೇಜರ್ ತನ್ನ ಟ್ರೈನಿಯನ್ನು ಕರೆದು ’ಸಮುದ್ರಕ್ಕೆ ಹಾರಿ ಚಲಿಸುತ್ತಿರುವ ಹಡಗಿನ ಸುತ್ತ ಒಂದು ಸುತ್ತು ಈಜಿ ಬಾ’ ಎಂದು ಹೇಳುತ್ತಾನೆ. ಆತ ಅದನ್ನು ಪೂರೈಸಿದಾಗ ಆ ಮ್ಯಾನೇಜರ್ ಉಳಿದವರಿಗೆ ಕೇಳುತ್ತಾನೆ, "ನೋಡಿದ್ರಾ ಅವನ ಗಟ್ಸ್?"
ನಂತರ ಎರಡನೇ ಕಂಪೆನಿಯ ಮ್ಯಾನೇಜರ್ ತನ್ನ ಟ್ರೈನಿಯನ್ನು ಕರೆದು ’ನೀನು ಎರಡು ಸುತ್ತು ಈಜಿ ಬಾ’ ಎನ್ನುತ್ತಾನೆ. ಆತ ಎರಡು ಸುತ್ತು ಈಜಿ ಬಂದಾಗ ಆ ಮ್ಯಾನೇಜರ್ ಉಳಿದವರಿಗೆ ಕೇಳುತ್ತಾನೆ, "ನೋಡಿದ್ರಾ ಅವನ ಗಟ್ಸ್?"
ಇದನ್ನೆಲ್ಲಾ ನೋಡುತ್ತಿದ್ದ ಮೂರನೇ ಕಂಪೆನಿಯ ಮ್ಯಾನೇಜರ್ ತನ್ನ ಟ್ರೈನಿಯನ್ನು ಕರೆದು ’ಇದೇ ರೀತಿಯ ಐದು ಸುತ್ತು ಈಜಿ ಬಾ’ ಎನ್ನುತ್ತಾನೆ.
ಆಗ ಆ ಟ್ರೈನಿ ತನ್ನ ಮ್ಯಾನೇಜರ್‌ಗೆ ಹೇಳುತ್ತಾನೆ, "ಏಯ್ ಅದೆಲ್ಲ ಆಗಲ್ಲ, ನಾನ್ಯಾಕೆ ಈಜಲಿ?"
ಮೂರನೇ ಕಂಪೆನಿಯ ಮ್ಯಾನೇಜರ್ ಉಳಿದವರಿಗೆ ಕೇಳುತ್ತಾನೆ, "ನೋಡಿದ್ರಾ ಅವನ ಗಟ್ಸ್?"
(ಆಂಗ್ಲ ನಗೆಹನಿಯೊಂದರ ಕನ್ನಡ ಅನುವಾದ)
ಸಗಣಿ ತಿನ್ನೋಕೆ ಕೆಚಪ್ ಬೇಕಾ?
ಒಬ್ಬಾತ ಹೊಸ ವ್ಯಾಕ್ಯೂಮ್ ಕ್ಲೀನರ್‍ನ ಮಾರಾಟಗಾರ ಒಂದು ಮನೆಯ ಬಾಗಿಲನ್ನು ತಟ್ಟಿದ. ಒಂದು ಮಹಿಳೆ ಆ ಮನೆಯ ಬಾಗಿಲನ್ನು ತೆಗೆದಳು. ಆಕೆ ಏನೆಂದು ಕೇಳುವ ಮೊದಲೇ ಆತ ಒಳಗೆ ನುಗ್ಗಿ ಪ್ಲಾಸ್ಟಿಕ್ ಚೀಲದಿಂದ ದನದ ಸಗಣಿ ತೆಗೆದು, ನೆಲಕ್ಕೆ ಹಾಕಿದ್ದ ಕಾರ್ಪೆಟ್ ಮೇಲೆ ಎರಚಿದ. ನಂತರ ಆಕೆಗೆ ಹೇಳಿದ, "ಮೇಡಂ, ನಮ್ಮ ಕಂಪೆನಿಯ ಹೊಸ ಶಕ್ತಿಶಾಲಿ ವ್ಯಾಕ್ಯೂಮ್ ಕ್ಲೀನರ್ ಬಳಸಿ ಇನ್ನು ಹತ್ತು ನಿಮಿಷದಲ್ಲಿ ಈ ಸಗಣಿಯನ್ನು ಸ್ವಲ್ಪವೂ ಉಳಿಯದಂತೆ ತೆಗೆಯುತ್ತೇನೆ. ಅದು ಸಾಧ್ಯವಾಗದಿದ್ದರೆ ನಾನೇ ಈ ಸಗಣಿಯನ್ನು ತಿನ್ನುತ್ತೇನೆ. ನಿಮಗೆ ನಂಬಿಕೆ ಬಂದ ನಂತರವೇ ಕೊಂಡುಕೊಳ್ಳಬಹುದು."
ಆಕೆ ಕೂಲಾಗಿ ಕೇಳಿದಳು, "ನಿಮಗೆ ಸಗಣಿ ತಿನ್ನೋಕೆ ಟೊಮ್ಯಾಟೋ ಕೆಚಪ್ ಬೇಕಾ?"
ಆತ ಆಶ್ಚರ್ಯದಿಂದ ಕೇಳಿದ, "ಏಕೆ ಮೇಡಂ?"
ಆಕೆಯ ಉತ್ತರ: "ಈಗ ಪವರ್ ಇಲ್ಲ. ಇನ್ನು ಅರ್ಧ ಗಂಟೆ ಆದ್ಮೇಲೇನೆ ಕರೆಂಟ್ ಬರೋದು!"
(ಆಂಗ್ಲ ನಗೆಹನಿಯೊಂದರ ಕನ್ನಡ ಅನುವಾದ)
Saturday, July 24, 2010
ಎಲ್ಲರೂ ಎಷ್ಟು ಕೊಡುತ್ತಿದ್ದಾರೆ?
ಒಂದು ಕಂಪೆನಿಯ ಎಲ್ಲಾ ಉದ್ಯೋಗಿಗಳು ತುಂಬಾ ಚಿಂತಿತರಾಗಿದ್ದರು. ಕೆಲವರು ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದರೆ ಇನ್ನು ಕೆಲವರು ಜೋರುದನಿಯಲ್ಲಿ ಚರ್ಚಿಸುತ್ತಿದ್ದರು. ಇದನ್ನೆಲ್ಲಾ ನೋಡುತ್ತಿದ್ದ ಹೊಸ ಟ್ರೈನಿಗಳು ಒಟ್ಟಾಗಿ ಬರುತ್ತಾರೆ. ಒಬ್ಬ ಟ್ರೈನಿಯು, ಹಿರಿಯ ಸಹೋದ್ಯೋಗಿಯ ಬಳಿ "ಇಲ್ಲಿ ಏನು ನಡೆಯುತ್ತಿದೆ?" ಎಂದು ಕೇಳುತ್ತಾನೆ.
ಆಗ ಆತ ಹೇಳುತ್ತಾನೆ, "ಭಯೋತ್ಪಾದಕರು ನಮ್ಮ ಬಾಸ್‌ನ್ನು ಅಪಹರಿಸಿದ್ದಾರೆ. ಅವರು ಒಂದು ಕೋಟಿ ಒತ್ತೆ ಹಣ ಕೇಳುತ್ತಿದ್ದಾರೆ. ಕೊಡದಿದ್ದರೆ ನಮ್ಮ ಬಾಸ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾರಂತೆ. ಅದಕ್ಕೆ ನಾವು ಸಂಗ್ರಹಣೆಗಾಗಿ ಪ್ರತಿಯೊಬ್ಬರ ಬಳಿ ಹೋಗುತ್ತಿದ್ದೇವೆ."
ಅವರಲ್ಲಿ ಒಬ್ಬ ಟ್ರೈನಿ ಕೇಳುತ್ತಾನೆ, "ನಾವೂ ಕೂಡ ನಿಮ್ಮ ಜೊತೆ ಕೈಜೋಡಿಸುತ್ತೇವೆ. ಅಂದಹಾಗೆ ಪ್ರತಿಯೊಬ್ಬರೂ ಎಷ್ಟು ಕೊಡುತ್ತಿದ್ದಾರೆ? ನಮಗೆ ಸಾದ್ಯವಾದರೆ ನಾವೂ ಅಷ್ಟೇ ಕೊಡುತ್ತೇವೆ."
ಆಗ ಆ ಹಿರಿಯ ಉದ್ಯೋಗಿ ಹೇಳುತ್ತಾನೆ,........
.
.
.
.
.
.
.
.
.
.
.
.
.
.
.
.
.
.
.
.
.
.
" ಸುಮಾರು ಒಂದು ಲೀಟರ್ "
:) ;-) :-) :D

Thursday, July 22, 2010
ಒಂದಿಷ್ಟು ಜೋಕ್‌ಗಳು...
1. ಗುಂಡ: ಅಮ್ಮ, ನಮ್ಮ ಟೀಚರ್‌ಗೆ ತುಂಬಾ ಮರೆವು.
ಅಮ್ಮ: ಯಾಕೋ ಗುಂಡ?
ಗುಂಡ: ನಮ್ ಟೀಚರ್ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ!
*************************************
ಅಮ್ಮ: ಯಾಕೋ ಗುಂಡ?
ಗುಂಡ: ನಮ್ ಟೀಚರ್ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ!
*************************************
2. ನಮ್ಮ ಸ್ನೇಹದ ಪಯಣ ತುಂಬಾ ನಡೆದಷ್ಟು ದೂರವಿದೆ. ಎಲ್ಲಿಯವರೆಗೆ ನಡೆಯಬೇಕೋ ಗೊತ್ತಿಲ್ಲ. ಎರಡು ಹೆಜ್ಜೆ ನೀವು ಹಾಕಿ, ಎರಡು ಹೆಜ್ಜೆ ನಾನು ಹಾಕುವೆ, ಆಮೇಲೆ.....
.
.
.
.
ಆಟೋ ರಿಕ್ಷಾ ಮಾಡೋಣ. :-)
***********************************
3. ಕೆಲವೊಮ್ಮೆ ಸಣ್ಣ ಸಣ್ಣ ವಸ್ತುಗಳು ತುಂಬಾ ನೋವನ್ನು ಕೊಡುತ್ತವೆ.
ನಂಬಿಕೆ ಇಲ್ಲದಿದ್ದರೆ ಸೂಜಿ ಮೇಲೆ ಕುಳಿತು ನೋಡಿ!!
***************************************************
4. ಸರ್ದಾರ್ ದೊಡ್ಡ ಸೈಂಟಿಸ್ಟ್ ಆದ. ಒಮ್ಮೆ ಅವನು ಕಪ್ಪೆಯ ಮೇಲೆ ಪ್ರಯೋಗ ಮಾಡಿದ.
ಕಪ್ಪೆಯ ಒಂದು ಕಾಲು ಕತ್ತರಿಸಿ ಹಾರು ಕಪ್ಪೆ ಎಂದು ಹೇಳಿದ, ಆಗ ಕಪ್ಪೆ ಹಾರಿತು.
ಆಮೇಲೆ ಎರಡನೆಯ ಕಾಲನ್ನು ಕತ್ತರಿಸಿ ಹಾರು ಕಪ್ಪೆ ಎಂದ, ಕಪ್ಪೆ ಸ್ವಲ್ಪ ದೂರಕ್ಕೆ ಹಾರಿತು.
ಮೂರನೆಯ ಕಾಲನ್ನೂ ಕತ್ತರಿಸಿ ಹಾರು ಕಪ್ಪೆ ಎಂದಾಗ ಹಾರಲು ಪ್ರಯತ್ನಿಸಿತು.
ಕೊನೆಗೆ ನಾಲ್ಕನೆಯ ಕಾಲನ್ನೂ ಕತ್ತರಿಸಿ ಹಾಕಿ ಹಾರು ಕಪ್ಪೆ ಎಂದಾಗ ಆ ಕಪ್ಪೆ ಹಾಗೇ ಬಿದ್ದುಕೊಂಡಿತ್ತು.
ಕಡೆಗೆ ಸರ್ದಾರ್ ತನ್ನ ತೀರ್ಮಾನವನ್ನು ಬರೆದ. "ಕಪ್ಪೆಯ ನಾಲ್ಕೂ ಕಾಲನ್ನು ಕತ್ತರಿಸಿದಾಗ ಅದಕ್ಕೆ ಕಿವಿ ಕೇಳೋಲ್ಲ".

*******************************************************
5. ಸರ್ದಾರ್ ಮೊಬೈಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಹೋದ. ಸಂದರ್ಶನದಲ್ಲಿ ಆತನಿಗೆ ಕೇಳಿದ ಮೊದಲನೇ ಪ್ರಶ್ನೆ, ತುಂಬಾ ಫೇಮಸ್ ನೆಟ್‌ವರ್ಕ್ ಯಾವ್ದು?
ಸರ್ದಾರ್‌ನ ಉತ್ತರ:- ಕಾರ್ಟೂನ್ ನೆಟ್‌ವರ್ಕ್!
*********************************************************
6. ಟೀಚರ್: ನಿಮ್ಗೆ ಇಂಗ್ಲೀಷ್ ಗ್ರಾಮರ್ ಬಗ್ಗೆ ಸಂಶಯ ಇದ್ರೆ ಕೇಳಿ.
ಸರ್ದಾರ್: "I don't know" ಅಂದ್ರೆ ಏನು?
ಟೀಚರ್: ನನಗೆ ಗೊತ್ತಿಲ್ಲ.
ಸರ್ದಾರ್: ನಿಮ್ಗೆ ಇದೇ ಗೊತ್ತಿಲ್ಲ, ಇನ್ನೇನು ಕೇಳೋದು?
********************************************
7. ಒಂದು ಹಳ್ಳಿಗೆ ಕರೆಂಟ್ ಬರೋ ಸುದ್ದಿ ಕೇಳಿ ಜನ ಖುಶಿಯಿಂದ ಡ್ಯಾನ್ಸ್
ಮಾಡ್ತಿದ್ರು. ಒಂದು ನಾಯಿ ಸಹ ಖುಶಿಯಿಂದ ಡ್ಯಾನ್ಸ್ ಮಾಡ್ತಿತ್ತು.
ಸರ್ದಾರ್: ನೀನ್ಯಾಕೆ ಡ್ಯಾನ್ಸ್ ಮಾಡ್ತಿದೀಯ?
ನಾಯಿ: ಕರೆಂಟ್ ಜೊತೆ ಕಂಬನೂ ಬರುತ್ತಲ್ವ?, ಅದಕ್ಕೆ!
:-)
ಮಾಡ್ತಿದ್ರು. ಒಂದು ನಾಯಿ ಸಹ ಖುಶಿಯಿಂದ ಡ್ಯಾನ್ಸ್ ಮಾಡ್ತಿತ್ತು.
ಸರ್ದಾರ್: ನೀನ್ಯಾಕೆ ಡ್ಯಾನ್ಸ್ ಮಾಡ್ತಿದೀಯ?
ನಾಯಿ: ಕರೆಂಟ್ ಜೊತೆ ಕಂಬನೂ ಬರುತ್ತಲ್ವ?, ಅದಕ್ಕೆ!
:-)
************************************************
Sunday, July 18, 2010
ಇಂಗ್ಲೀಷ್ ಗ್ರಾಮರ್
ಟೀಚರ್: ನಿಮ್ಗೆ ಇಂಗ್ಲೀಷ್ ಗ್ರಾಮರ್ ಬಗ್ಗೆ ಸಂಶಯ ಇದ್ರೆ ಕೇಳಿ.
ಸರ್ದಾರ್: "I don't know" ಅಂದ್ರೆ ಏನು?
ಟೀಚರ್: ನನಗೆ ಗೊತ್ತಿಲ್ಲ.
ಸರ್ದಾರ್: ನಿಮ್ಗೆ ಇದೇ ಗೊತ್ತಿಲ್ಲ, ಇನ್ನೇನು ಕೇಳೋದು?
ಸರ್ದಾರ್: "I don't know" ಅಂದ್ರೆ ಏನು?
ಟೀಚರ್: ನನಗೆ ಗೊತ್ತಿಲ್ಲ.
ಸರ್ದಾರ್: ನಿಮ್ಗೆ ಇದೇ ಗೊತ್ತಿಲ್ಲ, ಇನ್ನೇನು ಕೇಳೋದು?
ಹಳ್ಳಿಗೆ ಕರೆಂಟು!
ಒಂದು ಹಳ್ಳಿಗೆ ಕರೆಂಟ್ ಬರೋ ಸುದ್ದಿ ಕೇಳಿ ಜನ ಖುಶಿಯಿಂದ ಡ್ಯಾನ್ಸ್
ಮಾಡ್ತಿದ್ರು. ಒಂದು ನಾಯಿ ಸಹ ಖುಶಿಯಿಂದ ಡ್ಯಾನ್ಸ್ ಮಾಡ್ತಿತ್ತು.
ಸರ್ದಾರ್: ನೀನ್ಯಾಕೆ ಡ್ಯಾನ್ಸ್ ಮಾಡ್ತಿದೀಯ?
ನಾಯಿ: ಕರೆಂಟ್ ಜೊತೆ ಕಂಬನೂ ಬರುತ್ತಲ್ವ?, ಅದಕ್ಕೆ!
:-)
ಮಾಡ್ತಿದ್ರು. ಒಂದು ನಾಯಿ ಸಹ ಖುಶಿಯಿಂದ ಡ್ಯಾನ್ಸ್ ಮಾಡ್ತಿತ್ತು.
ಸರ್ದಾರ್: ನೀನ್ಯಾಕೆ ಡ್ಯಾನ್ಸ್ ಮಾಡ್ತಿದೀಯ?
ನಾಯಿ: ಕರೆಂಟ್ ಜೊತೆ ಕಂಬನೂ ಬರುತ್ತಲ್ವ?, ಅದಕ್ಕೆ!
:-)
ಟೀಚರ್‌ಗೆ ಮರೆವು
ಗುಂಡ: ಅಮ್ಮ, ನಮ್ಮ ಟೀಚರ್‌ಗೆ ತುಂಬಾ ಮರೆವು.
ಅಮ್ಮ: ಯಾಕೋ ಗುಂಡ?
ಗುಂಡ: ನಮ್ ಟೀಚರ್ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ!
ಅಮ್ಮ: ಯಾಕೋ ಗುಂಡ?
ಗುಂಡ: ನಮ್ ಟೀಚರ್ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ!
ಸ್ನೇಹ
ನಮ್ಮ ಸ್ನೇಹದ ಪಯಣ ತುಂಬಾ ನಡೆದಷ್ಟು ದೂರವಿದೆ. ಎಲ್ಲಿಯವರೆಗೆ ನಡೆಯಬೇಕೋ ಗೊತ್ತಿಲ್ಲ. ಎರಡು ಹೆಜ್ಜೆ ನೀವು
ಹಾಕಿ, ಎರಡು ಹೆಜ್ಜೆ ನಾನು ಹಾಕುವೆ, ಆಮೇಲೆ....
.
.
.
.
ಆಟೋ ರಿಕ್ಷಾ ಮಾಡೋಣ. :-)
ಹಾಕಿ, ಎರಡು ಹೆಜ್ಜೆ ನಾನು ಹಾಕುವೆ, ಆಮೇಲೆ....
.
.
.
.
ಆಟೋ ರಿಕ್ಷಾ ಮಾಡೋಣ. :-)
ಸೂಜಿ
ಕೆಲವೊಮ್ಮೆ ಸಣ್ಣ ಸಣ್ಣ ವಸ್ತುಗಳು ತುಂಬಾ ನೋವನ್ನು ಕೊಡುತ್ತವೆ.
ನಂಬಿಕೆ ಇಲ್ಲದಿದ್ದರೆ ಸೂಜಿ ಮೇಲೆ ಕುಳಿತು ನೋಡಿ!!
ನಂಬಿಕೆ ಇಲ್ಲದಿದ್ದರೆ ಸೂಜಿ ಮೇಲೆ ಕುಳಿತು ನೋಡಿ!!
ಕಪ್ಪೆಗೆ ಕಿವಿ ಕೇಳೋಲ್ಲ
ಸರ್ದಾರ್ ದೊಡ್ಡ ಸೈಂಟಿಸ್ಟ್ ಆದ. ಒಮ್ಮೆ ಅವನು ಕಪ್ಪೆಯ ಮೇಲೆ ಪ್ರಯೋಗ ಮಾಡಿದ.
ಕಪ್ಪೆಯ ಒಂದು ಕಾಲು ಕತ್ತರಿಸಿ ಹಾರು ಕಪ್ಪೆ ಎಂದು ಹೇಳಿದ, ಆಗ ಕಪ್ಪೆ ಹಾರಿತು.
ಆಮೇಲೆ ಎರಡನೆಯ ಕಾಲನ್ನು ಕತ್ತರಿಸಿ ಹಾರು ಕಪ್ಪೆ ಎಂದ, ಕಪ್ಪೆ ಸ್ವಲ್ಪ ದೂರಕ್ಕೆ ಹಾರಿತು.
ಮೂರನೆಯ ಕಾಲನ್ನೂ ಕತ್ತರಿಸಿ ಹಾರು ಕಪ್ಪೆ ಎಂದಾಗ ಹಾರಲು ಪ್ರಯತ್ನಿಸಿತು.
ಕೊನೆಗೆ ನಾಲ್ಕನೆಯ ಕಾಲನ್ನೂ ಕತ್ತರಿಸಿ ಹಾಕಿ ಹಾರು ಕಪ್ಪೆ ಎಂದಾಗ ಆ ಕಪ್ಪೆ ಹಾಗೇ ಬಿದ್ದುಕೊಂಡಿತ್ತು.
ಕಡೆಗೆ ಸರ್ದಾರ್ ತನ್ನ ತೀರ್ಮಾನವನ್ನು ಬರೆದ. "ಕಪ್ಪೆಯ ನಾಲ್ಕೂ ಕಾಲನ್ನು ಕತ್ತರಿಸಿದಾಗ ಅದಕ್ಕೆ ಕಿವಿ ಕೇಳೋಲ್ಲ".
ಫೇಮಸ್ ನೆಟ್‌ವರ್ಕ್
ಸರ್ದಾರ್ ಮೊಬೈಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಹೋದ. ಸಂದರ್ಶನದಲ್ಲಿ ಆತನಿಗೆ ಕೇಳಿದ ಮೊದಲನೇ ಪ್ರಶ್ನೆ,
ತುಂಬಾ ಫೇಮಸ್ ನೆಟ್‌ವರ್ಕ್ ಯಾವ್ದು?
ಸರ್ದಾರ್‌ನ ಉತ್ತರ:- ಕಾರ್ಟೂನ್ ನೆಟ್‌ವರ್ಕ್!
ತುಂಬಾ ಫೇಮಸ್ ನೆಟ್‌ವರ್ಕ್ ಯಾವ್ದು?
ಸರ್ದಾರ್‌ನ ಉತ್ತರ:- ಕಾರ್ಟೂನ್ ನೆಟ್‌ವರ್ಕ್!
ಟೆಕ್ನಿಕಲಿ ಪರ್ಫೆಕ್ಟ್, ಆದರೆ.....
ಮೇಲಿನ ಉತ್ತರ ನೋಡಿ. ಎಷ್ಟು ಸುಲಭವಾಗಿ xನ್ನು ಕಂಡು ಹಿಡಿದಿದ್ದಾನೆ. ಯಾವನೋ ಅತೀ ಬುದ್ಧಿವಂತನೇ ಬರ್ದಿರ್ಬೇಕು!
ಇದನ್ನು ನೋಡಿ ನನಗೊಂದು ಜೋಕ್ ನೆನಪಾಯಿತು....
ಒಂದು ನಗರದ ಮೇಲೆ ಹೆಲಿಕ್ಯಾಪ್ಟರ್‌ನಲ್ಲಿ ಪೈಲಟ್ ಹಾಗೂ ಸಹಪೈಲಟ್ ಹಾರಾಟ ನಡೆಸುತ್ತಿರುತ್ತಾರೆ. ಅವರಿಗೆ ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಕಡಿದು ಹೋದ ಕಾರಣ ತಾವೆಲ್ಲಿದ್ದೇವೆ ಎಂದು ತಿಳಿಯದೇ ಪೈಲಟ್ ಒಂದು ಕಟ್ಟಡದ ಸುತ್ತ ಒಂದು ಸುತ್ತು ಹಾಕಿ ಒಂದು ಹಾಳೆಯ ಮೇಲೆ "ನಾನೀಗ ಎಲ್ಲಿದ್ದೇನೆ?" ಎಂದು ದೊಡ್ಡದಾಗಿ ಬರೆದು ಆ ಕಟ್ಟಡದ ಎದುರಿಗೆ ಪ್ರದರ್ಶಿಸಿದ. ಅದನ್ನು ಓದಿ ಆ ಕಟ್ಟಡದಲ್ಲಿದ್ದ ಜನ ಒಂದು ಹಾಳೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಹೀಗೆ ಬರೆದು ಪೈಲಟ್‌ನ ಕಡೆ ಪ್ರದರ್ಶಿಸಿದರು, "ನೀವೀಗ ಒಂದು ಹೆಲಿಕ್ಯಾಪ್ಟರ್‌ನಲ್ಲಿದ್ದೀರ". ಆ ಉತ್ತರವನ್ನು ನೋಡಿ ನಸುನಕ್ಕ ಆ ಪೈಲಟ್ ಮ್ಯಾಪ್ ತೆಗೆದ. ನಂತರ ಆ ಮ್ಯಾಪ್‌ನಲ್ಲಿ ವಿಮಾನ ನಿಲ್ದಾಣವನ್ನು ಗುರುತಿಸಿ ಹೆಲಿಕ್ಯಾಪ್ಟರ್‌ನ್ನು ಸೀದಾ ನಿಲ್ದಾಣದಲ್ಲಿ ಇಳಿಸಿದ. ಆಗ ಸಹಪೈಲಟ್ ಕೇಳಿದ, "ನೀವೀಗ ಒಂದು ಹೆಲಿಕ್ಯಾಪ್ಟರ್‌ನಲ್ಲಿದ್ದೀರ" ಎಂಬ ಉತ್ತರ ನಿಮಗೆ ನಿಲ್ದಾಣ ಹುಡುಕಲು ಹೇಗೆ ಸಹಾಯ ಮಾಡಿತು? ಆಗ ಪೈಲಟ್, ಆ ಉತ್ತರದಿಂದ ನಾನೀಗ ಮೈಕ್ರೋಸಾಫ್ಟ್‌ನ ಕಟ್ಟಡದ ಪಕ್ಕ ಇದ್ದೇನೆ ಎಂದು ತಿಳಿಯಿತು, ನಂತರ ಮ್ಯಾಪ್‌ನಲ್ಲಿ ನಿಲ್ದಾಣದ ಮಾರ್ಗ ಹುಡುಕಿ ಹೆಲಿಕ್ಯಾಪ್ಟರ್ ಇಳಿಸಿದೆ ಎಂದನು. ನಿಮಗೆ ಅದು ಮೈಕ್ರೋಸಾಫ್ಟ್‌ನ ಕಟ್ಟಡವೆಂದು ಹೇಗೆ ತಿಳಿಯಿತು ಎಂದು ಸಹಪೈಲಟ್ ಕೇಳಿದನು. ಅದಕ್ಕೆ ಪೈಲಟ್ "ಅವರು ನೀಡಿದ ಉತ್ತರ ಮೈಕ್ರೋಸಾಫ್ಟ್‌ನ ಹೆಲ್ಪ್ ಲೈನ್‌ನ ಉತ್ತರದಂತೆ ಟೆಕ್ನಿಕಲಿ ಪರ್ಫೆಕ್ಟ್, ಆದರೆ ಸಂಪೂರ್ಣವಾಗಿ ಅನುಪಯುಕ್ತವಾಗಿತ್ತು. ಅದರಿಂದಲೇ ತಿಳಿಯಿತು ನಾನಾಗ ಎಲ್ಲಿದ್ದೆ ಎಂದು"... :-)
Subscribe to:
Posts (Atom)