ಇದೇನು ಸಮೋಸವನ್ನು ತಪ್ಪಾಗಿ ಬರೆದಿದ್ದಾನಲ್ಲ ಎಂದುಕೊಳ್ಳಬೇಡಿ. ನಾನು ಹೇಳುತ್ತಿರುವುದು ತಿನ್ನುವ ಸಮೋಸವಲ್ಲ, ಕಳುಹಿಸುವ ಸಮೊಸ. ಏನು, ಅರ್ಥವಾಗಲಿಲ್ಲವೇ? ಸಮೊಸ ಎಂದರೆ "ಸರಳ ಮೊಬೈಲ್ ಸಂದೇಶ" ಅರ್ಥಾತ್ SMS!. ಹೌದು! ಇದು ಮೊಬೈಲಿಂದ ಮೊಬೈಲಿಗೆ ಕಳುಹಿಸುವ ಸಮೊಸ. ನಾವೆಲ್ಲರೂ ಕನ್ನಡಿಗರಲ್ಲವೇ, ಹಾಗಾಗಿ ಇಂಗ್ಲೀಷಲ್ಲಿ ಎಸ್ಸೆಮ್ಮೆಸ್ಸ್ ಎಂದು ಹೇಳುವ ಬದಲು ಅಚ್ಚ ಕನ್ನಡದಲ್ಲಿ ’ಸಮೊಸ’ ಎನ್ನೋಣ. ನಾನಂತೂ ಎಸ್ಸೆಮ್ಮೆಸ್ಸ್ ಬದಲು ಸಮೊಸ ಕಳುಹಿಸುತ್ತಿದ್ದೇನೆ. ನೀವೂ ಇನ್ನು ಮುಂದೆ ಸಮೊಸ ಕಳುಹಿಸಿ.
ಅಂದಹಾಗೆ ’ಸಮೊಸ’ದ ಐಡಿಯ ದೇವರಾಣೆಗೂ ನನ್ನದಲ್ಲ. ನಾನೂ ’ಸಮೊಸ’ದ ಬಗ್ಗೆ ಓದಿದ್ದು ಆಸುಹೆಗ್ಡೆ ಅವರ ಬ್ಲಾಗ್‌ನಲ್ಲಿ. ಸಮೊಸದ ಬಗ್ಗೆ ತಿಳಿಸಿದ ಅವರಿಗೆ ನನ್ನ ಧನ್ಯವಾದಗಳು.
"ಕನ್ನಡ ಉಳಿಸಿ, ಕನ್ನಡ ಬೆಳೆಸಿ" ~~ಜೈ ಕರ್ನಾಟಕ ಮಾತೆ~~
-ಪ್ರಸನ್ನ.ಎಸ್.ಪಿ
-ಪ್ರಸನ್ನ.ಎಸ್.ಪಿ
2 comments:
ಹಹಹ.. ಒಳ್ಳೆಯ ಸಲಹೆ..
ಧನ್ಯವಾದಗಳು ದಿಲೀಪ್, :-)
Post a Comment