"ಬರಹ", ಇದು ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಬಳಸುವವರಿಗೆಲ್ಲರಿಗೂ ಚಿರಪರಿಚಿತ ತಂತ್ರಾಂಶ. ಕಂಪ್ಯೂಟರ್‌ನಲ್ಲಿ ಕನ್ನಡ ಲಿಪಿಯಲ್ಲಿ ಬರೆಯಲು ಹಾಗೂ ಕನ್ನಡದಲ್ಲಿ ಇಮೇಲ್ ಕಳುಹಿಸಲು ಸಹಾಯ ಮಾಡಿದ ಮೊತ್ತ ಮೊದಲ ಕನ್ನಡದ ತಂತ್ರಾಂಶ. ನಾನೂ ಕನ್ನಡದಲ್ಲಿ ಲೇಖನಗಳನ್ನು ಬರೆಯಬೇಕೆಂಬ ನನ್ನ ಕನಸನ್ನು ಈಡೇರಿಸಿಕೊಂಡಿದ್ದು ಇದೇ "ಬರಹ" ತಂತ್ರಾಂಶದ ಮೂಲಕ. ನಾನು ಪೆನ್ನು ಪೇಪರ್ ಬಳಸಿ ಬರೆದಿರುವುದಕ್ಕಿಂತಲೂ ಹೆಚ್ಚಾಗಿ ಬರಹ ತಂತ್ರಾಂಶ ಬಳಸಿ ಕಂಪ್ಯೂಟರ್‌ನಲ್ಲಿ ಬರೆದಿದ್ದೇನೆ. ಬರಹದ ಕಾರಣ ಕರ್ತರಾದ "ಶೇಷಾದ್ರಿ ವಾಸು" ಅವರಿಗೆ ನನ್ನ ಅನಂತ ಪ್ರಣಾಮಗಳು. "ಬರಹ" ಹಾಗೂ "ಶೇಷಾದ್ರಿ ವಾಸು" ಅವರ ಬಗ್ಗೆ ಆಗಸ್ಟ್ 22 2010ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ (ಪುಟ ಸಂಖ್ಯೆ 2) ಒಂದು ಲೇಖನ ಬಂದಿದೆ. ಅದು ಕೆಳಗಿನ ಚಿತ್ರದಲ್ಲಿದೆ. ಚಿತ್ರದ ಮೇಲೆ ಕ್ಲಿಕ್ಕಿಸಿ ಅದನ್ನು ಓದಬಹುದು.
No comments:
Post a Comment