ಮೂರ್ನಾಲ್ಕು ದಿನಗಳಿಂದ ಟ್ವಿಟರ್‌ನಲ್ಲಿ Twifficiency ಎನ್ನುವ ಒಂದು app ಭಾರೀ ಸಂಚಲನ ಮೂಡಿಸಿದೆ. ನೀವು ಟ್ವಿಟರ್‌ನ್ನು ಉಪಯೋಗಿಸುವುದರಲ್ಲಿ ಎಷ್ಟು efficient ಎನ್ನುವುದನ್ನು ಇದು ತಿಳಿಸಿಕೊಡುತ್ತದಂತೆ! ಒಬ್ಬರ ಹಿಂದೊಬ್ಬರಂತೆ ಎಲ್ಲರೂ ಅದನ್ನು ಉಪಯೋಗಿಸುತ್ತಿದ್ದಾರೆ. ಆದಕ್ಕೆ ಕಾರಣ ನೀವು Twifficiency ಉಪಯೋಗಿಸಿದ ತಕ್ಷಣ ನೀವೇ ಟ್ವೀಟ್ ಮಾಡಿದಂತೆ ಈ ರೀತಿಯ ಸಾಲುಗಳು ನಿಮ್ಮ ಅಕೌಂಟಿಂದ ಬರುತ್ತದೆ: My Twifficiency score is --%. Whats yours? http://twifficiency.com/ . ಅದನ್ನು ನೋಡಿದ ನಿಮ್ಮ followers ಕೂಡಾ Twifficiency ಉಪಯೋಗಿಸುತ್ತಾರೆ. ಆದರೆ ನನಗೆ ಇದೇಕೋ ನಮ್ಮ ಟ್ವಿಟರ್ ಅಕೌಂಟ್‌ನ್ನು ಹ್ಯಾಕ್ ಮಾಡುವ ತಂತ್ರದಂತೆ ಕಾಣಿಸುತ್ತಿದೆ. ಅದು ನಮ್ಮ ಅಕೌಂಟ್‌ನ್ನು access ಮಾಡೋಕೆ ಅನುಮತಿ ಕೇಳುತ್ತದೆ. ಆದರೆ ಇದನ್ನು ಬಳಸಿಕೊಂಡು ನಮ್ಮ ಅಕೌಂಟನ್ನು ಹ್ಯಾಕ್ ಮಾಡಲಾಗುತ್ತದೆಯೇ? ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. Twifficiency ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ.
ನಾನೂ ಕೂಡಾ Twifficiencyಯನ್ನು ಬಳಸಿದ್ದೆ. ತಕ್ಷಣವೇ ಅದಕ್ಕೆ ನೀಡಿದ್ದ access revoke ಮಾಡಿ ಪಾಸ್‌ವರ್ಡ್ ಬದಲಾಯಿಸಿದ್ದೇನೆ. ನೀವಿನ್ನೂ Twifficiencyಯನ್ನು ಉಪಯೋಗಿಸಿಲ್ಲದಿದ್ದರೆ ಅದನ್ನು ಉಪಯೋಗಿಸದಿರುವುದೇ ಒಳ್ಳೆಯದು. ಒಮ್ಮೆ ಅಕೌಂಟ್ ಹ್ಯಾಕ್ ಆದರೆ ನಿಮ್ಮ ಹೆಸರಲ್ಲಿ ಬೇರೆಯವರು ಏನೇನೋ ಟ್ವೀಟಿಸಬಹುದು. ಸಾಧ್ಯವಾದಷ್ಟೂ ಇಂತಹ ಅಪ್ಲಿಕೇಶನ್‌ಗಳಿಂದ ದೂರವಿರುವುದೇ ಒಳ್ಳೆಯದು.
Twifficiencyಗೆ ಕೊಟ್ಟಿರುವ access revoke ಮಾಡಲು ಟ್ವಿಟರ್‌ನಲ್ಲಿ ಲಾಗಿನ್ ಆಗಿ, ನಂತರ ಇಲ್ಲಿ ಕ್ಲಿಕ್ಕಿಸಿ.
ಗೂಗ್ಲಿಸಿದಾಗ ಕಂಡ ಕೆಲವೊಂದು ನ್ಯೂಸ್‌ಗಳು:
No comments:
Post a Comment