Monday, September 20, 2010

ಫೀಡ್ ಬರ್ನರ್‍ ಮತ್ತು Email Subscription

ನಿಮ್ಮ ಬ್ಲಾಗ್ ಓದುಗರಿಗೆ ಪ್ರತೀ ಬಾರಿ ನಿಮ್ಮ ಬ್ಲಾಗಿಗೆ ಬಂದು ಹೊಸ ಬರಹಗಳನ್ನು ಓದುವುದಕ್ಕೆ ತೊಂದರೆಯಾಗುತ್ತಿರಬಹುದು. ಅದಕ್ಕಾಗಿ ನೀವು ಅವರಿಗೆ ನಿಮ್ಮ ಹೊಸ ಬರಹಗಳನ್ನು ಇ-ಮೇಲ್ ಮೂಲಕ ತಲುಪಿಸಬಹುದು. ಅದಕ್ಕಾಗಿ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅದನ್ನೀಗ ವಿವರವಾಗಿ ನೋಡೋಣ.

(ಇಲ್ಲಿರುವ ಚಿತ್ರಗಳು ಚಿಕ್ಕದಾಗಿದೆ. ಅವುಗಳನ್ನು ಸ್ಪಷ್ಟವಾಗಿ ನೋಡಲು ಹಾಗೂ ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)



ಮೊದಲಿಗೆ http://feedburner.google.com ತಾಣಕ್ಕೆ ಹೋಗಿ. ಅಲ್ಲಿ ನಿಮ್ಮ ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆಗಿ.





Type your blog or feed address here: ಎಂದಿರುವಲ್ಲಿ ನಿಮ್ಮ ಬ್ಲಾಗ್ ವಿಳಾಸ ಅಥವಾ ಫೀಡ್ ವಿಳಾಸ ಕೊಡಿ. Next ಬಟನ್ ಒತ್ತಿರಿ.


 


Identify Feed Source ಕೇಳಿದಾಗ ಫೀಡ್ ಸೋರ್ಸ್ ಆರಿಸಿ (Atom ಅಥವಾ RSS feeds). Next ಬಟನ್ ಒತ್ತಿ.





ಫೀಡ್ ಟೈಟಲ್ ಹಾಗೂ ಫೀಡ್ ಅಡ್ರೆಸ್ ನೀಡಿ. (ಏನೂ ನೀಡದಿದ್ದರೂ ಪರವಾಗಿಲ್ಲ, ಮುಂಚೆಯೇ ಆ ಫೀಲ್ಡ್‌‌ಗಳು ತುಂಬಲ್ಪಟ್ಟಿರುತ್ತದೆ. ಬೇಕಿದ್ದರೆ ಬದಲಾಯಿಸಿಕೊಳ್ಳಬಹುದು.) ನಂತರ Next ಬಟನ್ ಒತ್ತಿ.


 



ಮುಂದಿನ ವಿಂಡೋನಲ್ಲಿ Skip directly to feed management ಒತ್ತಿ. ಅಥವಾ ನಿಮಗೆ ಇನ್ನಷ್ಟು ಸೌಲಭ್ಯಗಳು ಬೇಕಿದ್ದರೆ Next ಒತ್ತಿ. ಆದರೆ ಆ ಸೌಲಭ್ಯಗಳನ್ನು ನಂತರವೂ ಪಡೆಯಬಹುದು.





ಮುಂದಿನ ವಿಂಡೋನಲ್ಲಿ ಮೇಲೆ ಕಾಣುವ Publicize ಟ್ಯಾಬ್‌ನ್ನು ಒತ್ತಿ. (ಸಹಾಯ ಬೇಕಿದ್ದರೆ Blogger ಹಾಗೂ TypePad ಕೆಳಗೆ ಲಿಂಕ್‌ಗಳು ಇರುತ್ತದೆ. ಅದನ್ನು ಬಳಸಬಹುದು.)






Publicize ಟ್ಯಾಬ್‌ನ ಎಡಬದಿಯಲ್ಲಿ Email Subscriptions ಎಂಬ ಲಿಂಕ್ ಇರುತ್ತದೆ. ಅದನ್ನು ಒತ್ತಿ.






ನಂತರ Email Subscriptionsನಲ್ಲಿ "Activate" ಬಟನ್ ಒತ್ತಿ. 




ಮುಂದೆ ಬರುವ Subscription Management ವಿಂಡೋನಲ್ಲಿ "Subscription Form Code" ಇರುತ್ತದೆ. ಅದನ್ನು ಕಾಪಿ ಮಾಡಿಕೊಂಡು ನಿಮ್ಮ ಬ್ಲಾಗ್ ಅಥವಾ ಇತರ ತಾಣದಲ್ಲಿ HTML code support ಮಾಡುವ widgetನಲ್ಲಿ ಪೇಸ್ಟ್ ಮಾಡಿ ಉಪಯೋಗಿಸಬಹುದು. ಅಥವಾ ನೀವು  TypePad/Blogger ಉಪಯೋಗಿಸುತ್ತಿದ್ದಲ್ಲಿ ಅದನ್ನು ಆರಿಸಿಕೊಂಡು Go ಬಟನ್ ಒತ್ತಿ.






ನಂತರ ಬ್ಲಾಗ್‌ನ್ನು ಸೆಲೆಕ್ಟ್ ಮಾಡಿ, ಅದಕ್ಕೊಂದು ಹೆಸರು ಕೊಡಿ. ಸಾಮಾನ್ಯವಾಗಿ ಟೈಟಲ್ "Subscribe via email" ಎಂದಿರುತ್ತದೆ. ಅದಾದ ನಂತರ ADD WIDGET ಬಟನ್ ಒತ್ತಿ. 





ಅಲ್ಲಿಗೆ Email Subscription Form ಸೇರಿಸಿಯಾಯಿತು. ಅದನ್ನು ನಿಮ್ಮ ಬ್ಲಾಗ್ ಡಿಸೈನ್‌ನಲ್ಲಿ ಎಲ್ಲಿ ಬೇಕೋ ಅಲ್ಲಿ ಇಟ್ಟು ಸೇವ್ ಮಾಡಿಕೊಳ್ಳಿ.





 ಈಗ ನಿಮ್ಮ ಬ್ಲಾಗ್ ನೋಡಿದರೆ ಅಲ್ಲಿ Email Subscription Form ಕಾಣಿಸುತ್ತದೆ.





ನಂತರ ಮತ್ತೆ ಫೀಡ್ ಬರ್ನರ್‌ಗೆ ಬನ್ನಿ. Delivery Options ಕ್ಲಿಕ್ ಮಾಡಿ. Select Timezoneನಲ್ಲಿ ನಿಮ್ಮ Timezone ಆರಿಸಿ. Schedule Email Delivery: ಎಂಬಲ್ಲಿ ಚಂದಾದಾರರಿಗೆ ಇ-ಮೇಲ್‌ನ್ನು ಯಾವ ಸಮಯದಲ್ಲಿ ಕಳುಹಿಸಬೇಕು (ನೀವು ನಿಮ್ಮ ಬ್ಲಾಗ್‌ನಲ್ಲಿ ಹೊಸ ಬರಹ ಸೇರಿಸಿದಾಗ ಅದು ಚಂದಾದಾರರಿಗೆ ಆ ದಿನದ ಯಾವ ಸಮಯದಲ್ಲಿ ತಲುಪಬೇಕು) ಎಂದು ಸೆಲೆಕ್ಟ್ ಮಾಡಿ Save ಒತ್ತಿ.






ಸಧ್ಯಕ್ಕೆ ಇಷ್ಟು ಸಾಕು ಮುಂದಿನ ಭಾಗದಲ್ಲಿ ಫೀಡ್ ಬರ್ನರ್‌‌ನ ಇನ್ನಷ್ಟು ಸೌಲಭ್ಯಗಳನ್ನು ಪರಿಚಯಿಸುವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಏನಾದರೂ ಸಂದೇಹಗಳಿದ್ದರೆ ಕೇಳಿ, ಬಗೆಹರಿಸುವ ಪ್ರಯತ್ನ ಮಾಡುವೆ.

-ಪ್ರಸನ್ನ.ಎಸ್.ಪಿ

ಅಂತಃಸ್ಫುರಣ

Web Hosting

Sunday, September 19, 2010

ಸುಭಾಷಿತಗಳು-1

|||सुभाषितानि-1|||

पृथिव्यां त्रीणि रत्नानि
जलमन्नं सुभाषितम् |
मूढैः पाषाणखण्डेषु
रत्नसंಜ್ಞಾ विधीयते ||1||

प्रियवाक्यप्रदानेन
सर्वे तुष्यन्ति जन्तवः |
तस्मात्तदेव वक्तव्यं
वचने का दरिद्रता ||2||

विहाय पौरुषं यो हि
दैवमेवावलंबते |
प्रासादसिम्हवत्तस्य
मूर्ध्नि तिष्टन्ति वायसाः ||3||

श्लोकस्तु श्लोकतां याति
यत्र तिष्टन्ति पण्डिताः |
लकारो लुप्यते तत्र
यत्र तिष्टन्त्यपण्डिताः ||4||

शिरसि धार्यमाणोऽपि
सोमः सोमेन शम्भुना |
तथापि कृशतां याति
कष्टः खलु पराश्रयः ||5||

दृष्टिपूतं न्यसेत्पादं
वस्त्रपूतं विबेज्जलम् |
सत्यपूतां वदेद्वाणीं
मनः पूतं समाचरेत् ||6||

निर्वनो वध्यते व्याघ्रः
निर्व्याघ्रं चिध्यते वनम् |
तस्माद्व्याघ्रो वनं रक्षेत्
वनं व्याघ्रं च पालयेत् ||7||

मक्षिकाः व्रणमिच्छन्ति
धनामिच्छन्ति पार्थिवाः |
नीचाः कलहमिच्छन्ति
शान्तिमिच्छन्ति साधवाः ||8||

काकः कृष्णः पिकः कृष्णः
को भेदः पिककाकयोः |
वसन्तसमये प्राप्ते
काकः काकः पिकः पिकः ||9||

पादपानां भयं वातः
पद्मानां शिशिरो भयम् |
पर्वतानां भयं वज्रः
साधूनां दुर्जनो भयम् ||10||

-भर्तृहरिः

Tuesday, September 14, 2010

2500 ಮೊಟ್ಟೆ, 5000 ರೂಪಾಯಿ!

ಇವತ್ತು ಮಧ್ಯಾಹ್ನ ನನ್ನ ಮೊಬೈಲಿಗೆ ಯಾವುದೋ ನಂಬರಿಂದ ಕಾಲ್ ಬಂತು. ಯಾರದಪ್ಪಾ ಈ ನಂಬರ್‍ ಅಂತ ಅಂದುಕೊಂಡು ರಿಸೀವ್ ಮಾಡಿದರೆ ಆ ಕಡೆಯಿಂದ "ನೀವು ನೀಡಿದ ಆರ್ಡರ್‍‌ನಂತೆ ನಿಮ್ಮ ಮನೆಗೆ 2500 ಮೊಟ್ಟೆ ಕಳುಹಿಸಿದ್ದೇವೆ, ಲಾರಿ ಡ್ರೈವರ್‍ ಹತ್ರ 5000 ರೂಪಾಯಿ ಕೊಟ್ಟುಬಿಡಿ" ಎಂದು ಹೇಳಿದರು. ನನಗೆ ಒಂದು ಸಲ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ನಾನು ಮೊಟ್ಟೇನೆ ತಿನ್ನಲ್ಲ, ಅಂತದರಲ್ಲಿ ಎರಡೂವರೆ ಸಾವಿರ ಮೊಟ್ಟೆಗೇಕೆ ಆರ್ಡರ್‍ ಮಾಡುತ್ತೇನೆ, ಬಹುಷಃ ರಾಂಗ್ ನಂಬರ್‍ ಡಯಲ್ ಮಾಡಿರಬೇಕು ಎಂದುಕೊಳ್ಳುತ್ತಿರುವಾಗಲೇ ಆ ಕಡೆಯಿಂದ ಮತ್ತೆ ಧ್ವನಿ ಕೇಳಿಬಂತು- "ನೀವೂ ನಿಮ್ಮ ಸ್ನೇಹಿತರನ್ನು ಇದೇ ರೀತಿ ಬೇಸ್ತು ಬೀಳಿಸಬೇಕೆ? ಹಾಗಾದರೆ ನಮ್ಮ ಕಾಲರ್‍ ಟ್ಯೂನ್ಸ್‌‌ಗೆ ಚಂದಾದಾರರಾಗಿ, ದರಗಳು ತಿಂಗಳಿಗೆ 28 ರೂಪಾಯಿ ಮಾತ್ರ. ಕಾಲರ್‍ ಟ್ಯೂನ್ ಸೆಟ್ ಮಾಡಿಕೊಳ್ಳುವುದಕ್ಕಾಗಿ ಸ್ಟಾರ್‍ ಹಾಗೂ ಒಂಭತ್ತನ್ನು ಒತ್ತಿ. ಕಂಡೀಷನ್ಸ್ ಅಪ್ಲೈ."

ಇದನ್ನು ಕೇಳಿ ನಾನೂ ಬೇಸ್ತು ಬಿದ್ದೆನಲ್ಲಾ ಅಂತ ಸಿಕ್ಕಾ ಪಟ್ಟೆ ನಗು ಬಂತು. ನಿಮಗೂ  +919449056700 ನಂಬರಿಂದ ಕಾಲ್ ಬಂದರೆ ರಿಸೀವ್ ಮಾಡಿ, ತಮಾಷೆಯಾಗಿರುತ್ತದೆ. :-)

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ


ನನ್ನ ಹೊಸ ಬರಹಗಳನ್ನು ಇ-ಮೇಲ್ ಮುಖಾಂತರ ಪಡೆಯಲು ಇಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನು ನಮೂದಿಸಿ

Monday, September 13, 2010

ಅಂತಃಸ್ಫುರಣದ ಹೊಸ ಬರಹಗಳನ್ನು ಇ-ಮೇಲ್ ಮೂಲಕ ಪಡೆಯಿರಿ.

"ಅಂತಃಸ್ಫುರಣ"ದಲ್ಲಿ ಪ್ರಕಟವಾಗುವ ಹೊಸ ಬ್ಲಾಗ್ ಬರಹ ಹಾಗೂ ಲೇಖನಗಳನ್ನು ಓದಲು ಪ್ರತೀ ಸಲ ಈ ಬ್ಲಾಗಿಗೆ ಬರಲು ನಿಮಗೆ ತೊಂದರೆಯಾಗುತ್ತಿದ್ದರೆ, ನನ್ನ ಬರಹಗಳನ್ನು ಓದಲು ಇಲ್ಲೊಂದು ಸುಲಭದ ವಿಧಾನವಿದೆ. ಕೆಳಗೆ ಇರುವ ಬಾಕ್ಸ್‌‌ನಲ್ಲಿ ನಿಮ್ಮ ಇ-ಮೇಲ್ ವಿಳಾಸ ನಮೂದಿಸಿ, ನಂತರ "ಅಂತಃಸ್ಫುರಣಕ್ಕೆ ನಾನು ಚಂದಾದಾರನಾಗಬಯಸುತ್ತೇನೆ" ಬಟನ್ ಒತ್ತಿರಿ. Verification ವಿಂಡೋನಲ್ಲಿ ಬರುವ ಅಕ್ಷರಗಳನ್ನು ಟೈಪಿಸಿ verify ಮಾಡಿ. ನಂತರ ನಿಮ್ಮ ಇ-ಮೇಲ್ ಖಾತೆಗೆ kannadaprasanna[at]gmail.comನಿಂದ ಒಂದು  ಇ-ಮೇಲ್ ಬರುತ್ತದೆ, ಅದರಲ್ಲಿರುವ ಲಿಂಕ್‌‌ನ್ನು ಒತ್ತಿರಿ. ಇಷ್ಟು ಮಾಡಿದರೆ ಮುಂದೆ ಅಂತಃಸ್ಫುರಣದಲ್ಲಿ ಪ್ರಕಟವಾಗುವ ಎಲ್ಲ ಬ್ಲಾಗ್ ಬರಹ ಹಾಗೂ ಲೇಖನಗಳು ಇ-ಮೇಲ್ ಮುಖಾಂತರ ನಿಮಗೆ ತಲುಪುತ್ತದೆ. ಇದಕ್ಕೆ ಚಂದಾದಾರರಾದ ನಂತರ ನಿಮಗೆ ಈ ಸೌಲಭ್ಯ ಬೇಡ ಎನಿಸಿದರೆ unsubscribe ಮಾಡುವುದಕ್ಕೆ ಕೂಡ ಅವಕಾಶವಿದೆ, unsubscribe ಮಾಡುವ ವಿಧಾನವು ಅಂತಃಸ್ಫುರಣದಿಂದ ಬರುವ ಪ್ರತೀ ಇ-ಮೇಲ್ ಜೊತೆಗೆ ವಿವರಿಸಲ್ಪಟ್ಟಿರುತ್ತದೆ.


ಇಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನು ನಮೂದಿಸಿ, ನಂತರ ಅದರ ಕೆಳಗಿನ ಬಟನ್ ಒತ್ತಿರಿ.


ನಿಮ್ಮ ಇ-ಮೇಲ್ ವಿಳಾಸವನ್ನು ಎಲ್ಲಿಯೂ ಬಹಿರಂಗಗೊಳಿಸಲಾಗುವುದಿಲ್ಲ. ಅಸಲಿಗೆ ನನಗೆ ಕೂಡಾ ನಿಮ್ಮ ಇ-ಮೇಲ್ ವಿಳಾಸ ಗೊತ್ತಾಗುವುದಿಲ್ಲ. ಹಾಗಾಗಿ ನೀವು ಧೈರ್ಯವಾಗಿ ನಿಮ್ಮ ಇ-ಮೇಲ್ ವಿಳಾಸ ಕೊಡಬಹುದು.



ಇದನ್ನು ನೋಡಿದ ನಂತರ ನಿಮ್ಮ ಬ್ಲಾಗ್ ಓದುಗರಿಗೂ ಇದೇ ರೀತಿಯ ಸೌಲಭ್ಯ ಒದಗಿಸಬೇಕು ಎಂದೆನಿಸುತ್ತಿದೆಯೇ? ಹಾಗಾದರೆ ನನ್ನ ಮುಂದಿನ ಲೇಖನವನ್ನು ನಿರೀಕ್ಷಿಸಿ, :-)

ಹ್ಞಾ... ನನ್ನ ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ! :-)
 

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ