Monday, November 15, 2010

ಗೂಗಲ್ ಸರ್ಚ್: ನಿರ್ಧಿಷ್ಟ ತಾಣಕ್ಕೆ ಸೀಮಿತಗೊಳಿಸುವ ವಿಧಾನ

ನೀವು ಯಾವುದೇ ಒಂದು ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಬೇಕಾಗಿರುತ್ತದೆ, ಆದರೆ ಆ ತಾಣದಲ್ಲಿ ಹುಡುಕುವುದಕ್ಕೆ ಯಾವುದೇ ಸೌಲಭ್ಯ ಇರುವುದಿಲ್ಲ. ಆಗ ನೀವು ಯಾವುದೇ ಸರ್ಚ್ ಎಂಜಿನ್‌‌ನಲ್ಲಿ ಆ ವಿಷಯವನ್ನು ಹುಡುಕಲು ಕೊಟ್ಟರೆ ಅದು, ಆ ವಿಷಯವಿರುವ ಎಲ್ಲಾ ತಾಣಗಳನ್ನೂ ತೋರಿಸುತ್ತದೆ. ಅಂತಹ ಸಂದರ್ಭದಲ್ಲಿ ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಲು ಗೂಗಲ್‌ನಲ್ಲಿ ಸಾಧ್ಯವಾಗುತ್ತದೆ. ಅದಕ್ಕಾಗಿ ಮೊದಲು ಗೂಗಲ್ ತಾಣಕ್ಕೆ ಹೋಗಬೇಕು. ನಂತರ ಸರ್ಚ್‌ಬಾಕ್ಸ್‌ನಲ್ಲಿ ಮೊದಲು "site:ವೆಬ್‌ಸೈಟ್ ವಿಳಾಸ {ಸ್ಪೇಸ್} ವಿಷಯ" ಈ ರೀತಿ ಕೊಟ್ಟು ನಂತರ ಸರ್ಚ್ ಕೊಡಬೇಕು. ಆಗ ನೀವು ಸೂಚಿಸಿದ ನಿರ್ಧಿಷ್ಟ ತಾಣದಿಂದ ಮಾತ್ರ ಫಲಿತಾಂಶಗಳನ್ನು ಗೂಗಲ್ ತೋರಿಸುತ್ತದೆ.

ಉದಾಹರಣೆಗೆ-- site:sampada.net ಲಿನಕ್ಸಾಯಣ ಎಂದು ಕೊಟ್ಟು ಸರ್ಚ್ ಒತ್ತಿದರೆ ಸಂಪದದಲ್ಲಿ ಮಾತ್ರ ಇರುವ ಲಿನಕ್ಸಾಯಣ ಪುಟಗಳನ್ನು ತೋರಿಸುತ್ತದೆ.

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)


(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ


6 comments:

ಮಹೇಶ said...

ಉಪಯುಕ್ತ ಮಾಹಿತಿ. ಇದೇ ರೀತಿ ಒಂದಕ್ಕಿಂತ ಹೆಚ್ಚು ಅಂತರ್ಜಾಲ ತಾಣಗಳಲ್ಲಿ ಏಕಕಾಲದಲ್ಲಿ ಸರ್ಚ್ ಮಾಡಲು ಸಾಧ್ಯವಿದೆಯೇ

ಹರಿಹರಪುರ ಶ್ರೀಧರ್ said...

ಉತ್ತಮ ಮಾಹಿತಿಗಾಗಿ ಧನ್ಯವಾದಗಳು

ಸುಬ್ರಮಣ್ಯ ಮಾಚಿಕೊಪ್ಪ said...

ಧನ್ಯವಾದಗಳು

ಪ್ರಸನ್ನ ಶಂಕರಪುರ said...

@ಸುಬ್ರಮಣ್ಯ ಮಾಚಿಕೊಪ್ಪ,
ಧನ್ಯವಾದಗಳು, :-)

ಪ್ರಸನ್ನ ಶಂಕರಪುರ said...

@ಮನಮುಕ್ತಾ-- Thank you..

ಪ್ರಸನ್ನ ಶಂಕರಪುರ said...

@ ವಿ.ರಾ.ಹೆ ಧನ್ಯವಾದಗಳು,