ನುಡಿ(ANSI)ಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವುದು ಹೇಗೆಂದು ತುಂಬಾ ಜನರಿಗೆ ಗೊಂದಲಗಳಿವೆ. ಆದರೆ ಬರಹ ತಂತ್ರಾಂಶದ ಜೊತೆ ಬರುವ Baraha Convert ಸಲಕರಣೆಯ ಸಹಾಯದಿಂದ ನುಡಿಯಲ್ಲಿ ಬರೆದಿರುವುದನ್ನು ಸುಲಭವಾಗಿ ಯೂನಿಕೋಡ್‌ಗೆ ಪರಿವರ್ತಿಸಬಹುದು. ಅದಕ್ಕಾಗಿ ಮೊದಲು ಬರಹ ತಂತ್ರಾಂಶವನ್ನು ಇಲ್ಲಿಂದ (http://baraha.com) ಡೌನ್ಲೋಡ್ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಥಾಪಿಸಿ (install). (Baraha 7.0 ಆದರೆ ಸುಲಭ)
(ಇಲ್ಲಿರುವ ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
ಮೊದಲು ನೀವು ನುಡಿಯಲ್ಲಿ ಬರೆದಿರುವುದನ್ನು ಕಾಪಿ ಮಾಡಿಕೊಳ್ಳಿ.
ನಂತರ Baraha Convert ಸಲಕರಣೆಯನ್ನು ಚಾಲನೆ ಮಾಡಿ. Start--> All programs--> Baraha--> Baraha convert. (ಬರಹ10.0 ಆದರೆ Start--> All programs--> Baraha Software--> Baraha 10--> Tools--> BarahaConvert) ಬರಹ ಕನ್ವರ್ಟ್ ಸಲಕರಣೆಯ ಬಲಭಾಗದಲ್ಲಿ ANSI: ಎಂಬ ಕೆಳಗೆ ಬಿಳಿ ಬಣ್ಣದ ಬಾಕ್ಸ್ ಇರುತ್ತದೆ. ಅಲ್ಲಿ ನೀವು ನುಡಿ(ANSI)ಯಲ್ಲಿ ಬರೆದಿರುವುದನ್ನು ಪೇಸ್ಟ್ ಮಾಡಿ, ಮತ್ತು ಅದರ ಪಕ್ಕ BRHCODE ಕಡೆಗೆ ಮುಖಮಾಡಿರುವ ಬಾಣದ ಗುರುತನ್ನು ಒತ್ತಿ.
ಮುಂದೆ BRHCODEನಲ್ಲಿ ಒಂದಿಷ್ಟು ಅಕ್ಷರಗಳು ಬರುತ್ತದೆ. ಆಗ BRHCODEನಿಂದ UNICODE ಕಡೆಗೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತಿ.
ಅಲ್ಲಿಗೆ ನೀವು ನುಡಿಯಲ್ಲಿ ಬರೆದಿರುವುದು ಯೂನಿಕೋಡ್‌ಗೆ ಪರಿವರ್ತನೆಯಾಗಿರುತ್ತದೆ. ಅದನ್ನು ನೋಡಲು UNICODE ಪಕ್ಕದಲ್ಲಿರುವ View ಬಟನ್ ಒತ್ತಿ.
ಈಗ ಯೂನಿಕೋಡ್‌ಗೆ ಪರಿವರ್ತನೆಯಾಗಿರುವ ಪಠ್ಯವು ನೋಟ್‌ಪ್ಯಾಡ್‌ನಲ್ಲಿ ಓಪನ್ ಆಗುತ್ತದೆ. ಅದನ್ನು ನೀವು ಸೇವ್ ಮಾಡಿಕೊಳ್ಳಬಹುದು.
ಈ ವಿಷಯವಾಗಿ ಏನಾದರೂ ಸಂದೇಹಗಳಿದ್ದರೆ ಪ್ರಶ್ನೆಗಳನ್ನು ಕೇಳಿ, ಪರಿಹರಿಸುವ ಪ್ರಯತ್ನ ಮಾಡುವೆ.
ಧನ್ಯವಾದಗಳೊಂದಿಗೆ,
ಪ್ರಸನ್ನ.ಎಸ್.ಪಿ
3 comments:
ಪ್ರಿಯ ಪ್ರಸನ್ನ, ನಿಮ್ಮ ಮಾಹಿತಿ ನನಗೆ ಬಹಳ ಉಪಯುಕ್ತವಾಗಿದೆ. ಉಪಯೋಗಿಸುವಾಗ ತೊಂದರೆ ಬಂದರೆ ಸಂಪರ್ಕಿಸುವೆ. ಧನ್ಯವಾದಗಳು.
ಉತ್ತಮ ಮಾಹಿತಿ..
ಧನ್ಯವಾದಗಳು ಹರೀಶ,
Post a Comment