ಫೀಡ್ ಬರ್ನರ್‌ನ ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಓದುಗರಿಗೆ ನಿಮ್ಮ ಲೇಖನಗಳನ್ನು ಇ-ಮೇಲ್ ಮೂಲಕ ತಲುಪಿಸುವುದು ಹೇಗೆಂದು ತಿಳಿಸಿದ್ದೆ. ಈ ಸಲ, ನೀವು ಬ್ಲಾಗಿನಲ್ಲಿ ಹೊಸ ಬರಹ ಸೇರಿಸಿದಾಗ ಅದರ ಶೀರ್ಷಿಕೆ ತಾನಾಗಿಯೇ ಟ್ವಿಟರ್‌ನಲ್ಲಿ ಬರುವಂತೆ ಮಾಡುವುದು ಹೇಗೆ ಎಂದು ನೋಡೋಣ.(ಇದಕ್ಕೆ ನಿಮ್ಮಲ್ಲಿ ಒಂದು ಟ್ವಿಟರ್ ಅಕೌಂಟ್ ಇರಬೇಕು. ಇದರ ಉಪಯೋಗವೆಂದರೆ ನೀವು ನಿಮ್ಮ ಬ್ಲಾಗಿನಲ್ಲಿ ಹೊಸ ಲೇಖನ ಬರೆದಾಗ ಅದರ ಶೀರ್ಷಿಕೆ ಹಾಗೂ ಲೇಖನದ ಒಂದೆರಡು ಸಾಲು ಜೊತೆಗೆ ಆ ಲೇಖನಕ್ಕೆ ಲಿಂಕ್ ಟ್ವಿಟರ್‌ನಲ್ಲಿ ಪ್ರಕಟವಾಗುತ್ತದೆ. ಅದನ್ನು ನೋಡುವ ನಿಮ್ಮ ಟ್ವಿಟರ್ ಹಿಂಬಾಲಕರು{Followers} ನಿಮ್ಮ ಬ್ಲಾಗಿಗೆ ಭೇಟಿ ನೀಡಬಹುದು.)
ಈಗ ಅದನ್ನು ಪ್ರಾರಂಭಿಸುವುದು ಹೇಗೆ ನೋಡೋಣ. ಮೊದಲು ಫೀಡ್ ಬರ್ನರ್ ತಾಣಕ್ಕೆ ಹೋಗಿ(http://feedburner.com). ಅಲ್ಲಿ ನಿಮ್ಮ ಗೂಗಲ್ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಕೊಟ್ಟು ಲಾಗಿನ್ ಆಗಿ.
(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
ನಂತರ ನಿಮ್ಮ ಫೀಡ್ ಟೈಟಲ್ (FEED TITLE) ಮೇಲೆ ಕ್ಲಿಕ್ ಮಾಡಿ.
ನಂತರ ಬರುವ ವಿಂಡೋನಲ್ಲಿ ಮೇಲ್ಗಡೆ Publicize ಎಂಬ ಟ್ಯಾಬ್ ಇರುತ್ತದೆ. ಅದರ ಮೇಲೆ ಕ್ಲಿಕ್ಕಿಸಿ.
ಈಗ ಎಡಬದಿಯಲ್ಲಿರುವ Socialize ಒತ್ತಿ. Select account ಕೆಳಗೆ ಇರುವ Add a Twitter account ಮೇಲೆ ಕ್ಲಿಕ್ ಮಾಡಿ.
ಈಗ ಒಂದು ಹೊಸ ಟ್ವಿಟರ್ ವಿಂಡೋ ತೆರೆಯುತ್ತದೆ. ಅಲ್ಲಿ ನಿಮ್ಮ ಟ್ವಿಟರ್ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಟೈಪಿಸಿ, Allow ಬಟನ್ ಒತ್ತಿ.
ಇಷ್ಟು ಮಾಡಿದರೆ ಅರ್ಧ ಕೆಲಸ ಮುಗಿದಂತೆ ಆಯಿತು. ಈಗ ಇನ್ನೊಂದು ವಿಂಡೋನಲ್ಲಿರುವ ಫೀಡ್ ಬರ್ನರ್‌ನ Socialize ಆಯ್ಕೆಗೆ ಬನ್ನಿ. Post content: ಇಲ್ಲಿ ಲೇಖನದ ಶೀರ್ಷಿಕೆ ಮಾತ್ರ ಟ್ವೀಟ್ ಆಗಬೇಕೇ ಅಥವಾ ಶೀರ್ಷಿಕೆಯ ಜೊತೆ ಲೇಖನದ ಒಂದೆರಡು ಸಾಲುಗಳೂ ಸೇರಬೇಕೆ ಎಂದು ಆರಿಸಿ. Include link ಮತ್ತು Leave room for retweets ಸೆಲೆಕ್ಟ್ ಮಾಡಿ. ಉಳಿದ ಆಯ್ಕೆಗಳು ಅಷ್ಟೇನೂ ಮುಖ್ಯವಲ್ಲ, ಬೇಕಿದ್ದರೆ ಅವುಗಳನ್ನು ತುಂಬಿಸಿ.
ನಂತರ ಕೆಳಗೆ Sample Item Preview ನೋಡಿಕೊಳ್ಳಿ. ಎಲ್ಲಾ ಸರಿಯಿದೆ ಎನಿಸಿದರೆ ಕೊನೆಯಲ್ಲಿ Activate ಬಟನ್ ಇರುತ್ತದೆ, ಅದನ್ನು ಒತ್ತಿ.
ಅಲ್ಲಿಗೆ ಎಲ್ಲಾ ಕೆಲಸಗಳು ಮುಗಿದಂತೆ. ಮುಂದಿನ ಸಲ ನೀವು ನಿಮ್ಮ ಬ್ಲಾಗ್‌ನಲ್ಲಿ ಹೊಸ ಬರಹ ಸೇರಿಸಿದಾಗ ಅದರ ಶೀರ್ಷಿಕೆ ಮತ್ತು ಆ ಬರಹಕ್ಕೆ ಲಿಂಕ್ ಟ್ವೀಟಾಗುತ್ತದೆ. ಇದರ ಜೊತೆಗೆ ನೀವು ಫೇಸ್‌ಬುಕ್‌ನಲ್ಲಿ ಟ್ವಿಟರ್ ಅಪ್ಲಿಕೇಷನ್ ಸೇರಿಸಿದ್ದರೆ ಅಲ್ಲಿಯೂ ಆ ಟ್ವೀಟ್ ನಿಮ್ಮ ಸ್ನೇಹಿತರಿಗೆ ಕಾಣಿಸುತ್ತದೆ. ಆಗ ಅವರು ನಿಮ್ಮ ಬ್ಲಾಗಿಗೆ ಭೇಟಿ ನೀಡಬಹುದು.(ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವುದು ಜಾಣತನ ಅಲ್ಲವೇ?) ನಿಮ್ಮಲ್ಲಿ ಟ್ವಿಟರ್ ಅಕೌಂಟ್ ಇಲ್ಲದಿದ್ದರೆ ಇನ್ನೂ ಏಕೆ ಕಾಯುತ್ತಿದ್ದೀರ? ಈಗಲೇ ಒಂದು ಅಕೌಂಟ್ ಹೊಂದಿ ಮತ್ತು ನಿಮ್ಮ ಬ್ಲಾಗಿಗೆ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ.
ಈ ವಿಧಾನ ಬೇಡ ಎನ್ನುವುದಾದರೆ ನಿಮ್ಮ ಬ್ಲಾಗ್ ಪೋಸ್ಟ್‌ನ ಕೆಳಗೆ ಟ್ವೀಟ್ ಬಟನ್ ಇರುತ್ತದೆ. ಅದನ್ನು ಒತ್ತಿ ಟ್ವೀಟಿಸಬಹುದು.
ಹ್ಞಾಂ... ಸಂಪದದಲ್ಲೂ ಟ್ವೀಟ್ ಬಟನ್ ಇದೆ ಗಮನಿಸಿದ್ದೀರಾ?
© ಪ್ರಸನ್ನ ಶಂಕರಪುರ
3 comments:
long procedure it seems...
Thank you.. :-)
ಧನ್ಯವಾದಗಳು ಮಂಜುಳಾ ದೇವಿ ಅವರೇ,
Post a Comment