(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
Tuesday, December 14, 2010
ಲಿನಕ್ಸ್ ವೆಬ್ಸೈಟ್ನಲ್ಲಿ ವಿಂಡೋಸ್ ಜಾಹೀರಾತು!
ಇವತ್ತು ಹಾಗೇ ಲಿನಕ್ಸಿನ ಬಗ್ಗೆ ಜಾಸ್ತಿ ತಿಳಿದುಕೊಳ್ಳೋಣ ಎಂದು ಗೂಗಲ್ನಲ್ಲಿ ಹುಡುಕುತ್ತಿದ್ದೆ. ಹಾಗೆಯೇ ಲಿನಕ್ಸಿನ ಅಧಿಕೃತ ವೆಬ್ಸೈಟನ್ನೂ ತೆಗೆದೆ. ಅದರಲ್ಲಿ ನೋಡಿದರೆ ಒಂದು ಆಶ್ಚರ್ಯ ಕಾದಿತ್ತು. ಲಿನಕ್ಸ್ ವೆಬ್ಸೈಟ್ನಲ್ಲಿ ವಿಂಡೋಸಿನ ಜಾಹೀರಾತು! ದುಡ್ಡು ಕೊಟ್ಟು ಕೊಳ್ಳುವ ಆಪರೇಟಿಂಗ್ ಸಿಸ್ಟಮ್ಗಳಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಪ್ರಮುಖ ಸ್ವತಂತ್ರ ತಂತ್ರಾಂಶವಾದ ಲಿನಕ್ಸಿನ ಅಧಿಕೃತ (http://linux.org) ತಾಣದಲ್ಲಿ ಅದೇ ದುಡ್ಡು ಕೊಟ್ಟು ಕೊಳ್ಳುವ ವಿಂಡೋಸಿನ ಜಾಹೀರಾತು. ಅದೂ ಅಲ್ಲದೇ ವಿಂಡೋಸ್7ನ ವರ್ಣನೆ ಬೇರೆ! ಎಂತಹಾ ವಿಪರ್ಯಾಸ ಅಲ್ಲವೇ?
Subscribe to:
Posts (Atom)