Wednesday, August 11, 2010

ಶಾಲೆಗಳಿಗೆ ಕಂಪ್ಯೂಟರ್‍ ಕೊಡುಗೆ ನೀಡಿ.


ಈಗ ಕಂಪ್ಯೂಟರ್‍ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್‌ ಅಷ್ಟೊಂದು ಬಳಕೆಯಲ್ಲಿಲ್ಲ. ಅದಕ್ಕೆ ಬಹುಷಃ ಗ್ರಾಮೀಣ ಪ್ರದೇಶಿಗರಿಗೆ ಕಂಪ್ಯೂಟರ್‍ ಜ್ಞಾನ ಕಡಿಮೆಯಿರುವುದೇ ಕಾರಣವಿರಬಹುದು. ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್‍ ಶಿಕ್ಷಣ ನೀಡುವ ಸಂಸ್ಥೆಗಳೂ ಸಾಕಷ್ಟಿಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್‍ ಶಿಕ್ಷಣ ನೀಡಲು ಕ್ರಮ ಕೈಗೊಂಡಿದ್ದರೂ, ಕೆಲವು ಶಾಲೆಗಳಲ್ಲಿ ಕಂಪ್ಯೂಟರ್‍ ಇದ್ದರೆ ಕಲಿಸಲು ಶಿಕ್ಷಕರಿರುವುದಿಲ್ಲ, ಶಿಕ್ಷಕರಿದ್ದರೆ ಕಲಿಸಲು ಸಾಕಷ್ಟು ಕಂಪ್ಯೂಟರ್‌‌ಗಳೇ ಇರುವುದಿಲ್ಲ! ನಾನು ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗ ಇಡೀ ಶಾಲೆಗೆ ಒಂದೇ ಒಂದು ಕಂಪ್ಯೂಟರ್‍ ಇತ್ತು. ಅದರಲ್ಲೇ ಎಲ್ಲರೂ ಕಲಿಯಬೇಕಿತ್ತು. ಎಷ್ಟೋ ಮಕ್ಕಳಿಗೆ ಕಲಿಯುವ ಆಸಕ್ತಿ ಇದ್ದರೂ ಕಲಿಯಲು ಅವಕಾಶವೇ ಸಿಗುತ್ತಿರಲಿಲ್ಲ.

ನಾನು ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ನೀವು ನಿಮ್ಮ ಕಂಪ್ಯೂಟರ್‌ನ್ನು ಬದಲಾಯಿಸುತ್ತಿದ್ದರೆ ಹಳೆಯ ಸುಸ್ಥಿತಿಯಲ್ಲಿರುವ ಕಂಪ್ಯೂಟರ್‍ನ್ನು, ಸಾಧ್ಯವಾದರೆ ಯಾವುದಾದರೂ ಸೂಕ್ತ ಶಿಕ್ಷಕರಿರುವ ಗ್ರಾಮೀಣ ಸರ್ಕಾರಿ ಶಾಲೆಗೆ ಕೊಡುಗೆಯಾಗಿ ನೀಡಿ. ಇದರಿಂದ ಕಂಪ್ಯೂಟರ್‍ ಕಲಿಯಬೇಕೆನ್ನುವ ಮಕ್ಕಳಿಗೆ ಸಹಾಯವಾಗುತ್ತದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್‍ ಶಿಕ್ಷಣದ ಅವಶ್ಯಕತೆ ಸಾಕಷ್ಟಿದೆ. ನಮ್ಮ ಒಂದು ಸಣ್ಣ ಕೊಡುಗೆಯಿಂದ ಎಷ್ಟೋ ಮಕ್ಕಳಿಗೆ ಸಹಾಯವಾಗುವುದಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ ಅಲ್ಲವೇ?

-ಪ್ರಸನ್ನ.ಎಸ್.ಪಿ

No comments: